ಅಸಂಘಟಿತರಿಗೆ ಆರ್ಥಿಕ ನೆರವು ನೀಡಿ: ಶಿವಾನಂದ ಕವಲಗಾ

0
286

ಕಲಬುರಗಿ: ದಿನದಲ್ಲಿ 8 ಗಂಟೆ ಮಾತ್ರ ಕೆಲಸ ಮಾಡುತ್ತೇವೆ. ಅಸಂಘಟಿತರಿಗೆ ಆರ್ಥಿಕ ನೆರವು ನೀಡಿ, ಕೋರೋನಾ ಕುರಿತು ಜಾಗೃತಿ ನೀಡುವ ಕೆಲಸ ಮಾಡುತ್ತಿರುವ ಗ್ರಾಮ ಪಂಚಾಯತಿ ನೌಕರರಿಗೂ ಆರೋಗ್ಯ ವಿಮೆ ಮಾಡಬೇಕು ಎಂದು ಗ್ರಾ.ಪಂ.ನೌಕರರ ಸಂಘ ಜಿಲ್ಲಾ ಖಜಾಂಚಿ ಶಿವಾನಂದ ಕವಲಗಾ ಅವರು ಹೇಳಿದರು.

ತಾಲ್ಲೂಕಿನ ಕವಲಗಾ ಬಿ ಗ್ರಾಮ ಪಂಚಾಯತಿ ಕಾರ್ಯಾಲಯದ ಎದುರುಗಡೆ ಸಿಐಟಿಯು ಜಿಲ್ಲಾ ಸಮೀತಿ ವತಿಯಿಂದ 134 ನೇ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ ಅವರು, 14 ನೇ ಹಣಕಾಸು ಯೋಜನೆ ಯಲ್ಲಿ 10% ವೇತನ ಪಾವತಿ ಮಾಡಬೇಕು. ಗ್ರಾ.ಪಂ.ಸಿಬ್ಬಂದಿಗಳ ನೇಮಕಾತಿಗೆ ಅನುಮೋದನೆ ಮಾಡಬೇಕು. ವೇತನಕ್ಕೆ ಬೇಕಾಗುವ 382 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು. ಎಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ದೇವಿಂದ್ರ, ಶರಣಪ್ಪ ಕವಲಗಿ, ಶರಬಸಪ್ಪ, ಮಲ್ಕಮ್ಮ, ಗಂಗಮ್ಮ, ಆಶಾ ಕಾರ್ಯಕರ್ತೆಯರಾದ ವೈಶಾಲಿ ಮ್ಯಾಕೇರಿ, ರೇಣುಕಾ ಕವಲಗಾ, ಭಾಗಮ್ಮ ಬಸನಾಳ ಇತರರು ಇದ್ದರು. ಕಾರ್ಮಿಕ ದಿನಾಚರಣೆ ಚಿರಾಯುವಾಗಲಿ ಎಂಬ ಘೋಷಣೆ ಕೂಗಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here