ಆಳಂದ: ತಾಲೂಕಿನ ತೇಲ್ಲೂರ ಸೀಮಾಂತರದಲ್ಲಿ ಕಾಡು ಪ್ರಾಣಿಗಳನ್ನು ಬೇಟೆ ಆಡುತ್ತಿರುವ ವ್ಯಕ್ತಿ ಓರ್ವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಂಜು ಸೋಮಲು ಚೌವ್ಹಾಣ್ ಬಂಧಿತ ಆರೋಪಿ, ಚೌವ್ಹಾಣ್ ಗೋಳಾ (ಬಿ) ಗ್ರಾಮದ ನಿವಾಸಿ ಎಂದು ತಿಳಿದುಬಂದಿದ್ದು, ಕಾಡು ಪ್ರಾಣಿಗಳ ಬೇಟೆಗೆ ಬಳಸಿದ ಎರಡೂ ಬಲೆಗಳು ಸಮೇತ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಣಚಿರಾಯ (ಕೇಶವ) ಮೋಟಗಿ ಅವರ ಮಾಹಿತಿ ಆಧರಿಸಿ ಕಲಬುರಗಿ ಎಫ್.ಒ, ಆರ್.ಎಫ್.ಒ ಅವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ ಹಿನ್ನೆಲೆಯಲ್ಲಿ ಆಳಂದ ತಾಲೂಕಿನ ಆರ್.ಎಫ್.ಒ. ಜಗನ್ನಾಥ ಕೋರಳ್ಳಿ, ಉಪ ಆರ್.ಎಫ್.ಒ, ಸಂತೋಷ ಕುಮಾರ್ ನಿಪ್ಪಾಣಿ, ಅರಣ್ಯ ಸಿಬ್ಬಂದಿ ಸಿದ್ರಾಮ ಕುಸೂರ, ಡಿ.ಎಫ್.ಒ ವಾನತಿ, ಎಂ.ಎಂ. ಎ.ಸಿ.ಎಫ್. ಬಾಬುರಾವ್ ಪಾಟೀಲ ರವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.