ಆಳಂದ : ಮೇ 7ರಂದು ನಡೆಯಬೇಕಿದ್ದ ಆಳಂದ ತಾಲೂಕಿನ ಮಾದನಹಿಪ್ಪರಗಾದ ಶ್ರೀ ಶಿವಲಿಂಗೇಶ್ವರ ರಥೋತ್ಸವ ರದ್ದು ಪಡಿಸಿರುವುದಾಗಿ ಶ್ರೀಮಠದ ಪೀಠಾಧಿಪತಿ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಜಿ ತಿಳಿಸಿದ್ದಾರೆ.
ಈ ಕುರಿತು ಶ್ರೀಮಠದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕೊರೊನಾ ವೈರಸ್ ದೇಶವಾಪಿ ಆವರಿಸಿ ಜನರನ್ನು ಸಂಕಷ್ಟಕ್ಕೆ ದೂಡಿದೆ. ಇದನ್ನು ನಿಯಂತ್ರಿಸಲು ಸರಕಾರ ಆರೋಗ್ಯ ಇಲಾಖೆ ಶ್ರಮಿಸುತ್ತಿದೆ. ಸಾರ್ವಜನಿಕರು ಗುಂಪು ಸೇರದಂತೆ ನಿರ್ಬಂದ ವಿಧಿಸದ್ದು ಜಿಲ್ಲಾಡಳಿತ 144 ಕಲಂ ಜಾರಿ ಮಾಡಿ ಯಾವುದೆ ಜಾತ್ರೆ ನಡೆಸದಂತೆ ಕಟ್ಟಪ್ಪಣೆ ಹೊರಡಿಸಿದೆ. ಸರಕಾರ ನಿಯಮ ಪಾಲಿಸುವುದು ಕಡ್ಡಾಯವಾಗಿದೆ.
ಈ ನಿಟ್ಟಿನಲ್ಲಿ ಈ ವರ್ಷ ನಮ್ಮ ಜಾತ್ರೆಯನ್ನು ರದ್ದು ಪಡಿಸಲು ನಿರ್ಧರಿಸಲಾಗಿದ್ದು ಸಾರ್ವಜನಿಕರು ಹೊರಗಡೆ ಬಾರದೆ ಮನೆಯಲ್ಲೆ ಇದ್ದು ಜಾತ್ರೆಯನ್ನು ಆಚರಿಸಿಬೇಕು ಭಕ್ತರು ತಂಗಿನಕಾಯಿ ಕರ್ಪೂರಸಲು ಪೂಜ್ಯರ ದರ್ಶನ ಪಡೆಯಲು ಸಹ ಬರುವಂತಿಲ್ಲ ಭಕ್ತರು ಮನೆಯಲ್ಲೆ ಪೂಜ್ಯರ ಭಾವಚಿತ್ರ ಇಟ್ಟು ಜಾತ್ರೆ ಆಚರಿಸಿ ಎಂದು ಕೋರಿದ್ದಾರೆ.
ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ಬಸಲಿಂಗಯ್ಯಾ ಸ್ವಾಮಿ ಸಿದ್ದರಾಮ ಅರಳಿಮಾರೆ ಶಿವಲಿಂಗಪ್ಪಾ ಕಬಾಡಗಿ ಮುಖಂಡ ಶಿವಲಿಂಗಪ್ಪ ಮೈಂದರ್ಗಿ ಪಿ.ಎಸ್.ಐ ಇಂದುಮತಿ ಇದ್ದರು.