ಸಾರ್ವಜನಿಕರಿಗೆ ಅರಿವು ಮೂಡಿಸಲು 200 ಸ್ವಯಂ ಸೇವಕರ ಬಳಕೆ

0
45

ಕಲಬುರಗಿ: ನಗರದಲ್ಲಿ ಕೋರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚು ವರದಿಯಾಗುತ್ತಿರುವುದರಿಂದ ರೋಗ ನಿಯಂತ್ರಣಕ್ಕೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪಾಲಿಕೆಯಿಂದ 200 ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುತ್ತಿದೆÉ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ರಾಹುಲ ಪಾಂಡ್ವೆ ತಿಳಿಸಿದ್ದಾರೆ.

ಸ್ವಯಂ ಸೇವಕರು ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಿವಿಧ ವಾರ್ಡುಗಳಲ್ಲಿ ದಿನನಿತ್ಯ ಸಾರ್ವಜನಿಕರಿಗೆ ಮಾಸ್ಕ್, ಹ್ಯಾಂಡ್ ಗ್ಲೋಸ್, ಹ್ಯಾಂಡ್ ಸ್ಯಾನಿಟೇಜರ್ ಬಳಕೆ, ಸಾಮಾಜಿಕ ಅಂತರ ಕಾಪಾಡುವುದರ ಜೊತೆಗೆ ಕೊರೋನಾ ಲಕ್ಷಣ ಮತ್ತು ಅದರ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನ ಬಗ್ಗೆ ಅರಿವು ಮೂಡಿಸಲಿದ್ದಾರೆ. ಗುರುವಾರ ಈ ಸಂಬಂಧ ಎಲ್ಲಾ ಸ್ವಯಂ ಸೇವಕರಿಗೆ ಅಗತ್ಯ ತರಬೇತಿ ನೀಡಲಾಯಿತು ನಗರದ ಸಾರ್ವಜನಿಕರು ಸ್ವಯಂ ಸೇವಕರೊಂದಿಗೆ ಸಹಕರಿಸಬೇಕು ಎಂದು ರಾಹುಲ ಪಾಂಡ್ವೆ ಅವರು ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here