ಕಂಟೇನ್‍ಮೆಂಟ್ ಝೋನ್‍ಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ್ ಅವರು ಭೇಟಿ

0
29

ಕಲಬುರಗಿ: ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮಾಡಲಾಗಿರುವ ಕಂಟೇನ್‍ಮೆಂಟ್ ಝೋನ್‍ಗಳಿಗೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳದ ಕಪಿಲ್ ಮೋಹನ್ ಅವರು ಭೇಟಿ ನೀಡಿ, ಸ್ಥಳೀಯ ಜನತೆಯ ಯೋಗ-ಕ್ಷೇಮ ವಿಚಾರಿಸಿದರು.

ಮೋಮಿನ್‍ಪುರ ಸ್ಥಳೀಯ ಜನರೊಂದಿಗೆ ಮಾತನಾಡಿದ ಕಾರ್ಯದರ್ಶಿಗಳು, ಕೊರೋನಾ ವೈರಸ್ ಕುರಿತು ಆತಂಕಕ್ಕೆ ಒಳಗಾಗಬಾರದು. ಯಾವುದೇ ಊಹಾಪೋಹಗಳಿಗೆ ಆಸ್ಪದ ಕೊಡಬಾರದು. ಆದರೆ, ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ನಿವಾಸಿಗಳಿಗೆ ಜಾಗೃತಿ ಬಗ್ಗೆ ತಿಳಿಹೇಳಿದರು.

Contact Your\'s Advertisement; 9902492681

ಪ್ರೈಮರಿ, ಸೆಕೆಂಡರಿ ಕಾಂಟ್ಯಾಕ್ಟ್ ವ್ಯಕ್ತಿಗಳಿಗೆ ಆರೋಗ್ಯದ ದೃಷ್ಟಿಯಿಂದ ಕ್ವಾರಾಂಟೈನ್ ಮಾಡಲಾಗುತ್ತದೆ. ಇದಕ್ಕೆ ಯಾರೂ ಹೆದರಬಾರದು. ನಿಮ್ಮೆಲರ ಸಹಕಾರ ಅಗತ್ಯವಿದೆ. ಕ್ವಾರಾಂಟೈನÀಲ್ಲಿರುವವರ ಆರೋಗ್ಯಕ್ಕಾಗಿ ಸರ್ಕಾರ ಎಲ್ಲಾ ರೀತಿಯ ಕ್ರಮಕೈಗೊಂಡಿದೆ ಎಂದು ಹೇಳಿದರು.

ಆಸ್ಪತ್ರೆಯಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿನ ರೋಗಿಗಳಿಗೆ ಮನೆಯಿಂದ ಊಟ-ಉಪಹಾರ ನೀಡಬಹುದೆಂದು ಅವರು ತಿಳಿಸಿದರು. ಹಾಲು, ತರಕಾರಿ, ಹಣ್ಣು ಮುಂತಾದ ಅಗತ್ಯವಸ್ತುಗಳು ಸರಿಯಾಗಿ ಲಭ್ಯವಾಗುತ್ತಿವೆಯೇ ಎಂಬ ಬಗ್ಗ್ಗೆ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕರಾದ ಖನೀಜ್ ಫಾತಿಮಾ, ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಸತೀಶ್ ಕುಮಾರ್, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಡಿಸಿಪಿ ಕಿಶೋರ್ ಬಾಬು, ಸ್ಥಳೀಯ ಜನಪ್ರತಿನಿಧಿಗಳಾದ ಡಾ. ಅಜಗರ್ ಚುಲಬುಲ್, ರಹೀಮ್ ಮಿರ್ಚಿ, ನಾಸೀರ್ ಹುಸೇನ್ ಉಸ್ತಾದ, ಸೇರಿದಂತೆ ಅಧಿಕಾರಿಗಳು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here