ಕಲಬುರಗಿ: ನಗರ ಹಾಗೂ ಜಿಲ್ಲೆಯಾದ್ಯಂತ ಕೊರೋನಾ ವೈರಸ್ (ಕೋವಿಡ್-19) ನಿಯಂತ್ರಿಸಲು (2020ರ ಮಾರ್ಚ್ದಿಂದ) ಜಿಲ್ಲಾಡಳಿತದಿಂದ ಸಹಕರಿಸುತ್ತಿರುವ ಕಲಬುರಗಿ ನಗರದÀ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಖಾಜಾ ಬಂದೇನವಾಜ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಿಬ್ಬಂದಿಗಳಿಗೆ ಜಿಲ್ಲಾಡಳಿತ ಹಾಗೂ ಸರ್ಕಾರದ ಪರವಾಗಿ ರಾಜ್ಯದ ಉಪಮುಖ್ಯಮಂತ್ರಿಗಳು, ಲೋಕೋಪಯೋಗಿ, ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂಬಂಧ ಎರಡೂ ಮಹಾವಿದ್ಯಾಲಯಗಳಿಗೆ ಅಭಿನಂದನಾ ಪತ್ರ ನೀಡಿರುವ ಉಪಮುಖ್ಯಮಂತ್ರಿಗಳು ಇದೇ ರೀತಿಯ ಮುಂದೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ತಮ್ಮ ಆಸ್ಪತ್ರೆಗಳಲ್ಲಿ ಕೊವೀಡ್-19 ಪರೀಕ್ಷೆಗಾಗಿ ಪ್ರಯೋಗಾಲಯಗಳಿದ್ದಲ್ಲಿ ಸೂಕ್ತ ಉಪಕರಣ ಹಾಗೂ ನುರಿತ ತಜ್ಞ ವೈದ್ಯರೊಂದಿಗೆ ಸನ್ನದ್ಧರಾಗಿರಬೇಕೆಂದು ಅವರು ತಿಳಿಸಿದ್ದಾರೆ.