ಕಲಬುರಗಿ: ಮೇ 1 ಅಖಿಲ ಭಾರತ ಆಗ್ರಹದಿನದ ಆಂಗವಾಗಿ ಆಲ್ ಇಂಡಿಯಾ ಡೆಮಾಕ್ರೇಟಿಕ್ ಯೂತ್ ಆರ್ಗನೈಜೆಷನ್ ಎ.ಐ.ಡಿ.ವೈ.ಓ. ಜಿಲ್ಲಾ ಸಮಿತಿಯಿಂದ ಕೋವಿಡ್ 19 ಪರಿಕ್ಷೇ ಉಚಿತಗೋಳಿಸಬೇಕು ವಲಸೆ ಕಾರ್ಮಿಕರಿಗೆ, ದಿನಗೂಲಿಗಳು, ಇ ಕಾಮರ್ಸ ಕಾರ್ಮಿಕರನ್ನು ರಕ್ಷೀಸಬೇಕು ಎಲ್ಲಾರ ಉದೋಗ್ಯ ರಕ್ಷಿಸಬೇಕು ಪೂರ್ಣವೇತನ ನೀಡಬೇಕು ಎಂದು ಎ.ಐ.ಡಿ.ವೈ.ಓ ಶಹಾಬಾದ್ ಸಮಿತಿ ಉಪಾಧ್ಯಕ್ಷರಾದ ತಿಮ್ಮಣ್ಣಾ ಮನೆ ಆಗ್ರಹಿಸಿದೆ.
ಈ ಕುರಿತು ಬಿತ್ತಿ ಪತ್ರ ಪ್ರದರ್ಶನ ಮಾಡುವ ಮೂಲಕ ಗೊದಮುಗಳಲ್ಲಿ ಕೊಳೆಯುತ್ತಿರುವ 77 ದಶಲಕ್ಷ ಟನ್ ಆಹಾರ ದಾನ್ಯ ಬಡವರಿಗೆ ಹಂಚ್ಚÀಬೇಕು ನೀರುದೋಗ್ಯಗಳಿಗೆ ಜನ್‍ಧನ್ ಖಾತೆದಾರರಿಗೆ ಮುಂದಿನ ಕನಿಷ್ಟ 6 ತಿಂಗಳು ಮಾಸಿಕ ರೂ.5000ಸಹಾಯ ಪ್ಯಾಕೇಜ್ ನೀಡಬೇಕು, ಅತಿಥಿ ಉಪನ್ಯಾಸಕರಿಗೆ ಹಾಗು ಅತಿಥಿ ಶಿಕ್ಷಕರಿಗೆ ವೇತನವನ್ನು ಕೂಡಲೆ ಬಿಡುಗಡೆಗೊಳಿಸಿ ಒತ್ತಾಯಿಸಲಾಯಿತು.
ನರೇಗಾ ಅಡಿಯಲ್ಲಿ ಕನಿಷ್ಟ ದುಡಿಯುವದಿನಗಳ ಸಂಖ್ಯೇಯನ್ನು 200ದಿನಗಳಿಗೆ ಏರಿಸಬೇಕು ಎಂಬ ಬೇಡಿಕೆಗಳಿಗೆ ಆಗ್ರಹಿಸಿ ಆಖಿಲ ಭಾರತ ಆಗ್ರಹ ದಿನ ಪ್ರಯುಕ್ತ, ಚಳುವಳಿ ನೆಡೆಸಲಾಯಿತು, ಶಹಾಬಾದ ತಾಲೂಕ , ವಾಡಿ ಚಿತ್ತಾಪೂರ ತಾಲೂಕ ,ಜೆವರ್ಗಿ,ಕಲಬುರಗಿ,ವಿವಿಧ ಗ್ರಾಮಗಳಿಂದ ಸೇರಿದಂತೆ .1000ಕ್ಕು ಹೆಚ್ಚಾಗಿ ಬೇಡಿಕೆಗಳ ಚಿತ್ರ ಪತ್ರ ಹಿಡಿದು ಹಾಗೂ ದೈಹಿಕ ಅಂತರವನ್ನು ಕಾಯ್ದುಕೊಂಡು,ಆಖಿಲ ಭಾರತ ಆಗ್ರಹ ದಿನಕ್ಕೆ ಬೆಂಬಲಿಸಿ ದರು ಎಐಡಿವೈಓ ಜಿಲ್ಲಾ ಅಧ್ಯಕ್ಷ ನಿಂಗಣ್ಣಾ ಜೆಂಬಗಿ, ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಎಸ್. ಎಚ್ ರವರು ಚಿತ್ರ ಪತ್ರ ಹಿಡಿದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಚಳುವಳಿಯಲ್ಲಿ ಈಶ್ವರ ,ಭೀಮಾಶಂಕರ ಪಾಣೆಗಾಂವ್, ಶಿವಕುಮಾರ ಇ ಕೆ ,ಸಿದ್ದು ಚೌದ್ರಿ, ಪ್ರವಿಣ್ ಬಣವಿಕರ ,ಶರಣು ವಿ ಕೆ ,ಮಲ್ಲಿನಾಥ ಹುಂಡೆಕಲ್,ಸೇರಿದಂತ್ತೆ ಎ.ಐ.ಡಿ.ವೈ.ಓ.ಸ್ಥಳೀಯ ಸಮಿತಿ ಸದಸ್ಯರು ಉಪಸ್ಥಿತರಿದರು.