ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್ ನಿಧನಕ್ಕೆ ಕಸಾಪ ಸಂತಾಪ

0
42

ಚಿತ್ತಾಪುರ: ಅನಾರೋಗ್ಯದಿಂದ ನಿತ್ಯೋತ್ಸವದ ಕವಿ ಎಂದೇ ಖ್ಯಾತಿ ಪಡೆದ ಕೆ.ಎಸ್.ನಿಸಾರ್ ಅಹ್ಮದ್(೮೪) ನಿಧನಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತೀವ್ರ ಸಂತಾಪ ಸೂಚಿಸಿದೆ.

ಖ್ಯಾತ ಕವಿ ಕೆ.ಎಸ್.ನಿಸಾರ್ ಅಹ್ಮದ್ ಶಿವಮೊಗ್ಗದಲ್ಲಿ ನಡೆದಿದ್ದ ೭೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮಾಸ್ತಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಪಡೆಯುವ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಪ್ರಸ್ತುತ ಅವರ ನಿಧನದಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಕಾಶಿನಾಥ ಗುತ್ತೇದಾರ ಸಂತಾಪ ಸೂಚಿಸಿದ್ದಾರೆ.

Contact Your\'s Advertisement; 9902492681

ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಕೆ.ಎಸ್.ನಿಸಾರ್ ಅಹ್ಮದ್ ತಮ್ಮ ಜೀವತ ಕಾಲಾವಧಿಯಲ್ಲಿ ೨೧ ಕವನ ಸಂಕಲನಗಳು, ೧೪ ವೈಚಾರಿಕ ಕೃತಿಗಳು, ೫ ಮಕ್ಕಳ ಸಾಹಿತ್ಯ ಕೃತಿಗಳು, ೫ ಅನುವಾದ ಕೃತಿಗಳು, ೧೩ ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ. ಅವುಗಳಲ್ಲಿ ಮನಸು ಗಾಂಧಿಬಜಾರು ಹಾಗೂ ನಿತ್ಯೋತ್ಸವ ಇವು ಪ್ರಸಿದ್ದ ಕವನ ಸಂಕಲನಗಳಾಗಿವೆ ನಿಸಾರ್ ಅಹ್ಮದ್ ಸಂವೇದನಾಶೀಲ ಹಾಗೂ ಜನಪ್ರೀಯ ಕವಿ ಆಗಿದ್ದರು ಎಂದು ಕಸಾಪ ಗೌರವ ಕಾರ್ಯದರ್ಶಿ ಸಿದ್ದಲಿಂಗ ಬಾಳಿ ಸ್ಮರೀಸಿದರು.

ಕಸಾಪ ಪದಾಧಿಕಾರಿಗಳಾದ ರಾಜಶೇಖರ ಬಳ್ಳಾ, ನರಸಪ್ಪ ಚಿನ್ನಕಟ್ಟಿ, ಜಗದೇವ ದಿಗ್ಗಾಂವಕರ್, ದೇವಪ್ಪ ನಂದೂರಕರ್, ಕಾಶಿರಾಯ ಕಲಾಲ್, ರಾಮಣ್ಣ ಡೋಣಗಾಂವ, ಮಹ್ಮದ ಇಬ್ರಾಹಿಂ, ರವಿ ಕುಲಕರ್ಣಿ ಸಂತಾಪ ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here