ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರರಿಂದ ಮಾಸ್ಕ್ ವಿತರಣೆ

0
62

ಆಳಂದ: ತಾಲೂಕಿನ ಗ್ರಾಮಿಣ ಪ್ರದೇಶದ ಹಳ್ಳಿಗಳಲ್ಲಿ ಸೋಮವಾರ ಶಾಸಕ ಸುಭಾಷ್ ಆರ್ ಗುತ್ತೇದಾರ ಗ್ರಾಮಸ್ಥರಿಗೆ ಮಾಸ್ಕ್‍ಗಳನ್ನು ವಿತರಿಸಿದರು.

ತಾಲೂಕಿನ ಕಿಣ್ಣಿ ಸುಲ್ತಾನ, ತೇಲಾಕುಣಿ, ಚಿತಲಿ, ಸಾಲೇಗಾಂವ ಗ್ರಾಮಗಳಲ್ಲಿ ಮಾಸ್ಕ್ ವಿತರಣೆ ಮಾಡಿ ಮಾತನಾಡಿದ ಶಾಸಕರು, ಸಧ್ಯ ಪರಿಸ್ಥಿತಿ ಭಯಾನಕವಾಗಿದೆ ಜನ ಮನೆಯಲ್ಲೇ ಇದ್ದು ಆಡಳಿತದ ಜೊತೆ ಸಹಕರಿಸಬೇಕಾಗಿದೆ. ಸಾಮಾಜಿಕ ಅಂತರ ಎನ್ನುವುದು ಇನ್ಮುಂದೆ ನಮ್ಮ ಬದುಕಿನ ಅಂಗವಾಗಬೇಕಿದೆ ಈ ನಿಟ್ಟಿನಲ್ಲಿ ಎಲ್ಲರೂ ಮಾಸ್ಕ್ ಧರಿಸಿ ವ್ಯವಹಾರ ಮಾಡಬೇಕು ಎಂದು ಹೇಳಿದರು.

Contact Your\'s Advertisement; 9902492681

ತಾಲೂಕಿನ ಪಟ್ಟಣ ಪ್ರದೇಶ ಒಳಗೊಂಡು ಪ್ರತಿಯೊಂದು ಗ್ರಾಮಗಳಲ್ಲಿ ಸಮಸ್ಯೆಗಳು ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ತಾಲೂಕಾ ಆಡಳಿತಕ್ಕೆ ನಿರ್ದೇಶನ ನೀಡಿದ್ದೇನೆ ಅಧಿಕಾರಿಗಳು ಸಹ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನರ ಉದ್ಯೋಗದ ಸಲುವಾಗಿ ಈಗಾಗಲೇ ನರೇಗಾ ಯೋಜನೆ ಅಡಿಯ ಉದ್ಯೋಗ ಖಾತ್ರಿ ಕೆಲಸ ಆರಂಭಿಸಲಾಗಿದೆ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಾಬ್ ಕಾರ್ಡ ಇಲ್ಲದವರು ಕೂಡ ಯಾವುದಾದರೂ ಒಂದು ವಿಳಾಸದ ದಾಖಲೆಯನ್ನು ಕೊಟ್ಟು ಜಾಬ್ ಕಾರ್ಡ ಮಾಡಿಸಿಕೊಳ್ಳಬಹುದು. ಕುಡಿಯುವ ನೀರಿನ ಗಂಭೀರ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷೆ ಸುವರ್ಣ ಹಣಮಂತರಾವ ಮಲಾಜಿ, ಮುಖಂಡ ಹಣಮಂತರಾವ ಮಲಾಜಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here