ಸುರಪುರದಲ್ಲಿ ಶುರುವಾದ ಸಾರಿಗೆ: ಫೀವರ್ ಚೆಕ್ ಮಾಡಿ ಪ್ರಯಾಣಕ್ಕೆ ಅವಕಾಶ

0
25

ಸುರಪುರ: ಕೊರೊನಾ ವೈರಸ್ ಭೀತಿಯಿಂದ ಕಳೆದ ನಲವತ್ತು ದಿನಗಳಿಂದ ಲಾಕ್‍ಡೌನ್ ಘೋಷಣೆಯಿಂದಾಗಿ ಬಂದ್ ಮಾಡಲಾಗಿದ್ದ ಸಾರಿಗೆ ಇಂದಿನಿಂದ ತಾಲೂಕಿನಾದ್ಯಂತ ಆರಂಭಿಸಲಾಯಿತು.ಬೆಳಿಗ್ಗೆ ಆರು ಗಂಟೆಗೆ ಎಂದಿನಂತೆ ಆಯಾ ರೂಟ್‍ಗಳಿಗೆ ಓಡುವ ಬಸ್‍ಗಳು ನಿಲ್ದಾಣಕ್ಕೆ ಬರುತ್ತಿದ್ದಂತೆ ಜನರಲ್ಲಿ ಸಂತಸ ವiನೆ ಮಾಡಿತ್ತು.

ಬೆಳಿಗ್ಗೆ ನಿಲ್ದಾಣಕ್ಕೆ ಬಸ್‍ಗಳು ಬರುತ್ತಿದ್ದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ನಿಲ್ದಾಣದಲ್ಲಿ ಎಲ್ಲಾ ಚಾಲಕ ಮತ್ತು ನಿರ್ವಾಹಕರಿಗೆ ಹಾಗೂ ಬಸ್ ಹತ್ತಲು ನಿಂತಿದ್ದ ಎಲ್ಲಾ ಪ್ರಯಾಣಿಕರಿಗು ಫೀವರ್ ಚೆಕ್ ಮಾಡುವ ಮೂಲಕ ಬಸ್ ಹತ್ತಲು ಅವಕಾಶ ಮಾಡಿಕೊಟ್ಟರು.

Contact Your\'s Advertisement; 9902492681

ಫೀವರ್ ಚೆಕ್‍ಗೆ ಒಳಗಾದ ಗ್ರಾಮೀಣ ಪ್ರದೇಶಕ್ಕೆ ಸಣ್ಣಪುಟ್ಟ ವ್ಯಾಪಾರಕ್ಕೆ ತೆರಳುವ ವ್ಯಾಪರದಾರರು ಇಂದಿನಿಂದ ತಮ್ಮ ದುಡಿಮೆ ಆರಂಭಗೊಳ್ಳುತ್ತಿರುವ ಖಷಿಯಿಂದ ಬಸ್ ಹತ್ತಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here