ಎಂಎಸ್‍ಐಎಲ್ ಮುಂದೆ ಮದ್ಯ ಪ್ರಿಯರು ಸೇರಿ ಸಾಮಾಜಿಕ ಅಂತರ ಮರೆತರು

0
67

ಸುರಪುರ: ಕೊರೊನಾ ವೈರಸ್ ಹರಡದಂತೆ ತಡೆಯಲೆಂದು ಸರಕಾರ ಸಾಮಾಜಿಕ ಅಂತರದ ನಿಯಮ ರೂಪಿಸಿ ವ್ಯಕ್ತಿಯಿಂದ ವ್ಯಕ್ತಿಗೆ ಕನಿಷ್ಟ ಆರು ಫೀಟ್‍ಗಳ ಅಂತರ ಕಾಯ್ದುಕೊಳ್ಳುವಂತೆ ಹಾಗು ಮನೆಯಿಂದ ಹೊರಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿರುವಂತೆ ನಿಯಮ ಮಾಡಿದೆ.ಆದರೆ ಇವೆಲ್ಲವು ಬಾರ್ ಮುಂದೆ ಲೆಕ್ಕಕ್ಕೆ ಇಲ್ಲದಂತಾಗಿದೆ.

ನಗರದ ಎಂಎಸ್‍ಐಎಲ್ ಬಾರ್ ಮುಂದೆ ಸೇರಿದ ನೂರಾರು ಸಂಖ್ಯೆಯ ಜನರು ಸಾಲುಗಟ್ಟಿ ಒಬ್ಬರ ಮೇಲೊಬ್ಬರು ಬೀಳುವ ರೀತಿಯಲ್ಲಿ ನಿಂತು ಸಾಮಾಜಿಕ ಅಂತರ ಮರೆತದ್ದು ಕಂಡಬಂತು.ಅಲ್ಲದೆ ಸಾಲಲ್ಲಿ ನಿಂತ ಅನೇಕ ಜನ ಮದ್ಯ ಪ್ರೀಯರು ಮುಖಕ್ಕೆ ಮಾಸ್ಕ್ ಧರಿಸದೆ ಮುಂಜಾಗ್ರತೆ ಇಲ್ಲದೆ ನೂಕು ನುಗ್ಗುಲು ಉಂಟು ಮಾಡಿದರು.

Contact Your\'s Advertisement; 9902492681

ಈಗಾಗಲೆ ರಾಜ್ಯದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ನಿತ್ಯವು ಏರುತ್ತಿದ್ದು ಗುಳೆ ಹೋಗಿ ಬಂದವರನ್ನು ಆಸ್ಪತ್ರೆಗಳಲ್ಲಿ ಫೀವರ್ ಚೆಕ್ ಮಾಡುತ್ತಿದ್ದರು ಯಾರಲ್ಲಾದರೂ ಸೊಂಕು ಕಾಣಿಸಿಕೊಂಡರೆ ಗತಿ ಏನು ಎಂಬದು ಎಲ್ಲರ ಚಿಂತೆಯಾದರೆ,ಬಾರ್ ಮುಂದೆ ನಿಂತು ಮದ್ಯ ಖರೀದಿಗೆ ನೂಕು ನುಗ್ಗಲಲ್ಲಿ ಸೇರಿದವರಲ್ಲಿ ಗುಳೆ ಹೋಗಿ ಬಂದವರು ಇರುವುದು ವಿಪರ್ಯಾಸವಾಗಿದೆ.

ಪೊಲೀಸ್ ಸಿಬ್ಬಂದಿ ಸಾಲಲ್ಲಿ ನಿಂತ ಸುರಪಾನ ಪ್ರಿಯರನ್ನು ನಿಯಂತ್ರಿಸಲು ಪ್ರಯತ್ನಿಸಿದರು ಸಾಧ್ಯವಾಗುತ್ತಿಲ್ಲ.ಆದ್ದರಿಂದ ಇನ್ನೂ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ನೇಮಿಸುವ ಅವಶ್ಯಕತೆ ಇದೆ ಎಂದು ಅನೇಕರು ಮಾತಾಡಿಕೊಳ್ಳುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here