ಸುರಪುರ: ರಾಜ್ಯದಲ್ಲಿ ಲಾಕ್‍ಡೌನ್ ಘೋಷಣೆಯಾಗಿದ್ದರಿಂದ ಎಲ್ಲಾ ವರ್ಗದ ಜನರು ಕೆಲಸವಿಲ್ಲದೆ ಸಂಪಾದನೆ ಇಲ್ಲದೆ ನಿತ್ಯವು ದಿನ ಕಳೆಯುವುದು ತೊಂದರೆಯಾಗಿದೆ.ಇಂತಹ ಸಂದರ್ಭದಲ್ಲಿ ಸರಕಾರ ಬಡ ಮತ್ತು ಮದ್ಯಮ ವರ್ಗದ ಜನರಿಗೆ ನೆರವಾಗಬೇಕೆಂದು ಟಿಪ್ಪು ಸುಲ್ತಾನ್ ಯುವಕ ಸಂಘದ ಅಧ್ಯಕ್ಷ ಹರ್ಷದ್ ದಖನಿ ಆಗ್ರಹಿಸಿದ್ದಾರೆ.
ಈಗಾಗಲೆ ಮಾರ್ಚ್ ತಿಂಗಳಿಂದ ಮೇ ತಿಂಗಳ ವರೆಗೆ ಮೂರು ತಿಂಗಳಿಂದ ರಾಜ್ಯದಲ್ಲಿ ಲಾಕ್‍ಡೌನ್ ಇದೆ ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿನ ಎಲ್ಲಾ ವಿದ್ಯೂತ್ ಸರಬರಾಜು ಕಂಪನಿಗಳು ಬಡ ಮತ್ತು ಮದ್ಯಮ ವರ್ಗದ ಕುಟುಂಬಗಳ ವಿದ್ಯೂತ್ ಬಿಲ್ ನೀಡುವಂತೆ ಒತ್ತಾಯಿಸದಂತೆ ನಿರ್ದೇಶನ ನೀಡಬೇಕು.ಈಗಾಗಲೆ ಜೆಸ್ಕಾಂ ಸೇರಿದಂತೆ ಅನೇಕ ವಿದ್ಯೂತ್ ಸರಬರಾಜು ಕಂಪನಿಗಳು ಬಡ ಕುಟುಂಬಗಳಿಗೆ ಬಿಲ್ ನೀಡುತ್ತಿವೆ.ಇದನ್ನು ನಾಡಿನ ಎಲ್ಲಾ ಜನರು ವಿರೋಧಿಸುತ್ತೇವೆ.
ಕೂಡಲೆ ಸರಕಾರ ರಾಜ್ಯದ ಯಾವುದೇ ಕುಟುಂಬಗಳಿಂದ ವಿದ್ಯೂತ್ ಬಿಲ್ ವಸೂಲಿ ಮಾಡದೆ ಮಾರ್ಚ್ ಎಪ್ರಿಲ್ ಮತ್ತು ಮೇ ತಿಂಗಳ ವಿದ್ಯೂತ್ ಉಚಿತ ಸರಬರಾಜಿನ ಘೋಷಣೆ ಮಾಡಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗಲಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ಸರಕಾರಕ್ಕೆ ಆಗ್ರಹಿಸಿದ್ದಾರೆ.