ಎಣ್ಣೆಗೋಸ್ಕರ ಟಿವಿಯನ್ನೇ ಮಾರಿದ ಮದ್ಯಪ್ರಿಯ

0
74

ಕಲಬುರಗಿ: ಮದ್ಯಕ್ಕಾಗಿ ಮನೆಯಲ್ಲಿದ್ದ ಟಿವಿಯನ್ನೇ ಮಾರಿ ಮದ್ಯ ಕುಡಿದಿರುವ ಘಟನೆ ಜಿಲ್ಲೆಯ ಜೇವರ್ಗಿ ಪಟ್ಟಣದ ಪ್ರಕಾಶ್‌ ಬಡಾವಣೆಯಲ್ಲಿ ನಡೆದಿದೆ.

ಮಹಾಮಾರಿ ಕೊರೊನಾದಿಂದಾಗಿ ಮದ್ಯಪಾನ ನಿಷೇಧಗೊಳಿಸಲಾಗಿತ್ತು. ಇದರಿಂದ ಮದ್ಯ ಪ್ರಿಯರು ಕೆಂಗಟ್ಟಿದರು ಮೇ.4 ಸೋಮವಾರದಂದು ಮದ್ಯ ಅಂಗಡಿ ಓಪನ್ ಮಾಡಲು ಅವಕಾಶ ನೀಡಿದ್ದು, ದೇಶದ್ಯಂತ ಭಾರಿ ಸಂಖ್ಯೆಯಲ್ಲಿ ಮದ್ಯ ಪ್ರಿಯರು ಎದ್ದು ಬಿದ್ದು ಮದ್ಯದ ಅಂಗಡಿ ಮುಂದೆ ಸರತಿಯಲ್ಲಿ ನಿಂತಿದ್ದರು.

Contact Your\'s Advertisement; 9902492681

ಆದರೆ ಗ್ರಾಮೀಣ ಭಾಗದಲ್ಲಿ ಮತ್ತು ನಗರದ ಬಡ ಕಾರ್ಮಿಕ ಮದ್ಯ ವೆಸನಿಗಳ ಕುಟುಂಬಗಳ ಜಗಳ, ಮತ್ತು ನೋವಿನ ದಿನವಾಗಿ ಮರುಕಳಿಸಲು ಆರಂಭಿಸಿವೆ.

ಜೇಬಿನಲ್ಲಿ ಹಣ ಖಾಲಿಯಾಗಿತ್ತು. ಎಣ್ಣೆ ಕುಡಿಯೋದಕ್ಕಾಗಿ ಹೆಂಡತಿ, ಮಕ್ಕಳಿಗೆ ತಿಳಿಸದೇ ಮನೆಯಲಿದ್ದ ಟಿವಿ ಮಾರಲು ಹೋಗ್ತಿದ್ದೀನಿ ಅಂತಾ ಸ್ಥಳೀಯರಿಗೆ ತಿಳಿಸಿ, ಎಣ್ಣೆ ಬೇಕು, ಎಣ್ಣೆ ಕುಡಿಬೇಕು ಅಂತ ಮನೆಯಲ್ಲಿದ್ದ ಟಿವಿಯನ್ನು ಮಾರಿ ಎಣ್ಣೆ ಕುಡಿದು ತೂರಾಡುತ್ತಿರುವ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here