ಕಲಬುರಗಿಯಲ್ಲಿ ಧೋ ಎಂದು ಸುರಿದ ಆಲಿಕಲ್ಲು ಮಳೆ

0
170

ಕಲಬುರಗಿ: ಹೊರಗೆ ಕೊರೊನಾ ಕಾಟ, ಒಳಗೆ ಬಿಸಿಲಿನಿಂದ ಧಗೆಯ ಕಾಟ ಎನ್ನುವಂತೆ ಇತ್ತೀಚಿನ ಮೂರ್ನಾಲ್ಕು ದಿನಗಳಲ್ಲಿ ವಿಪರೀತ ಬಿಸಿಲು, ಜಳ, ಧಗೆ ಇತ್ತು.

ಹೇಳಿ ಕೇಳಿ ಬಿಸಿಲೂರು ಖ್ಯಾತಿಯ ಕಲಬುರಗಿ ಕಾದು ಕೆಂಡವಾಗಿತ್ತು. ಕೊರೊನಾ ಮಹಾಮಾರಿಯಿಂದ ಈ ಬಾರಿಯ ಬಿಸಿಲಿನ ತಾಪ ಬಹಳ ಜನಕ್ಕೆ ಆಗಿರಲಿಲ್ಲ. ಆದರೆ ಲಾಕ್ ಡೌನ್ ಸಡಿಲಿಕೆಯಿಂದಾಗಿ ಹೊರೆಗೆ ಬಂದರೆ ” ಏನ್ ಬಿಸಿಲುರಿ, ಯಪ್ಪಾ ಶಿವ ಶಿವ” ಅನ್ನುವಂತಾಗಿತ್ತು.

Contact Your\'s Advertisement; 9902492681

ಇಂಥ ಸುಡು ಬಿಸಿಲು ತಂಪುಗೊಳಿಸಲು ಮಳೆರಾಯ ಇಂದು ಧರೆಗೆ ಬಂದ ಇಂದು ಸಂಜೆ ೫ ಗಂಟೆಯಿಂದ ಜೋರಾದ ಗಾಳಿ ಶುರುವಾಗಿ ಗುಡುಗಿದಂತಾಗಿ ಕೊನೆಗೆ ಸುಮಾರು ೧ ಗಂಟೆಗಳ ಕಾಲ ಧೋ ಎಂದು ಮಳೆ ಸುರಿಯಿತು.

ಮಳೆ, ಗಾಳಿಯಿಂದಾಗಿ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆಯ ಇಕ್ಕೆಲಗಳಲ್ಲಿನ ಗಿಡ ಮರಗಳ ಟೊಂಗೆಗಳು ಮುರಿದು ರಸ್ತೆಯ ಮೇಲೆ ಬಿದ್ದಿರುವುದು ಕಂಡು ಬಂದಿತು.

ಒಟ್ಟಾರೆಯಾಗಿ ಬಹುದಿನಗಳ ನಂತರ ಬಂದ ಮಳೆ ಜಿಲ್ಲೆಯ ಜನತೆಗೆ ಖುಷಿ ಕೊಟ್ಟಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here