ನಮೋಶಿ ಮನವಿಗೆ ಖಂಡನೆ

0
26

ಕಲಬುರಗಿ: ವಿಧಾನ ಪರಿಷತ್ ಮಾಜಿ ಸದಸ್ಯ ನಮೋಶಿಯವರ ತುಟ್ಟಿಭತ್ಯೆ ಕಡಿತ ಮಾಡಬೇಡಿ” ಎಂಬ ಮನವಿಗೆ ಎಸ್ ಎಸ್ ಹಿರೇಮಠ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹದಿನೆಂಟು-ಇಪ್ಪತ್ತು ವರ್ಷಗಳ ಕಾಲ ಶಾಸಕರಾಗಿ, ಅನುಭವಿ ರಾಜಕಾರಣಿಗಳಾಗಿ, ಸಾರ್ವಜನಿಕ ಬದುಕಿನಲ್ಲಿರುವ ನಮ್ಮ ಈ ಹಾಜಿ-ಮಾಜಿ ಜನಪ್ರತಿನಿಧಿಗಳು ಒಮ್ಮೊಮ್ಮೆ, ಹೀಗೇ ಏಕೆ, ವಿಚಾರ ಶೂನ್ಯರಾಗಿ, ವರ್ತಿಸುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ ಸಮಸ್ತ ವಿಶ್ವವನ್ನು ತಲ್ಲಣಗೊಳಿಸಿರುವ ಮಹಾ ಮಾರಿ “ಕೋವಿಡ್-೧೯”ಗೆ ಕರ್ನಾಟಕ ರಾಜ್ಯ ಮೊದಲ್ಗೊಂಡು ಇಡೀ ಭಾರತ ದೇಶವೇ ತತ್ತರಿಸುತ್ತಿದೆ ಇಂತಹ ಸಂದರ್ಭದಲ್ಲಿ ಮಾಜಿ ಎಮ್‌ಎಲ್‌ಸಿ ಶಶೀಲ ನಮೋಶಿಯವರ ಹೇಳಿಕೆಯನ್ನು ಖಂಡಿಸಲಾಗುವುದು ಎಂದು ಎಸ್ ಎಸ್ ಹಿರೇಮಠ ತಿಳಿಸಿದ್ದಾರೆ.

Contact Your\'s Advertisement; 9902492681

ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಹಿರೇಮಠರು, ಶತಮಾನ ಕಂಡರಿಯದ ವಿಪತ್ತಿನಿಂದ ಇಡೀ ಮನುಕುಲವೇ ತೊಳಲಾಡುತ್ತಿದೆ. ಸಾವು ನಮ್ಮೆಲ್ಲರ ಹೆಗಲೇರಿದೆ. ರಾಷ್ಟ್ರದ, ರಾಜ್ಯದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಪ್ರಸಕ್ತ ವಿದ್ಯಮಾನಗಳು ನಾವು ಅಂದುಕೊಂಡಷ್ಟು ಸರಳವಾಗಿಲ್ಲ. ಕರ್ನಾಟಕ ರಾಜ್ಯದ ಪಾಡಂತೂ ಹೇಳತೀರದಷ್ಟು ಇದೆ. ಕೋವಿಡ್-೧೯ರ ಹಾವಳಿಯನ್ನು ಮಟ್ಟ ಹಾಕಲು, ಅಸಂಘಟಿತ ವಲಯದ ಲಕ್ಷಾವಧಿ ಅಸಹಾಯಕರಿಗೆ ಕನಿಷ್ಟ ಎರಡು ಹೊತ್ತಿನ ಊಟ ಹಾಕಲು ಕರ್ನಾಟಕ ರಾಜ್ಯ ಸರ್ಕಾರ ಪರದಾಡುತ್ತಿದೆ. ನಿಶ್ಚಿತ ವರಮಾನದ ಸಂಪನ್ಮೂಲಗಳ ಕ್ರೋಡಿಕರಣಕ್ಕೆ ಅನುಭವಿ ಮುಖ್ಯ ಮಂತ್ರಿಗಳಾದ ತಮ್ಮ ಘನ ನೇತ್ರತ್ವದಲ್ಲಿ ಆರ್ಥಿಕ ತಜ್ಞರು ಕೈಗೊಂಡ ” ರಾಜ್ಯ ಸರ್ಕಾರಿ ನೌಕರರ ಮೂರು ಹಂತದ ತುಟ್ಟಿಭತ್ಯ ದರಗಳನ್ನು ಸ್ಥಗಿತ ಗೊಳಿಸಿದ ಆದೇಶ ” ಸಮಸ್ತ ಕನ್ನಡಿಗರ ಶ್ಲಾಘನೆಗೆ ಪಾತ್ರವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಲಿ, ಅಥವಾ ಆ ಸಂಘದ ಯಾವೊಬ್ಬ ಸದಸ್ಯ ರಾಗಲಿ ಅಥವಾ ನೌಕರರಾಗಲೀ ಚಕಾರವೆತ್ತಿಲ್ಲ. ಅಲ್ಪ ಸ್ವಲ್ಪ ಪಿಂಚಣಿ ಪಡೆಯುವ ನಿವೃತ್ತ ಹಿರಿಯ ಜೀವಿಗಳು ಸಹ ಸರ್ಕಾರದ ಈ ಆದೇಶದ ಬಗ್ಗೆ ಸಂಪ್ರೀತದಿಂದ-ಸಮಾಧಾನದಿಂದ ಇದ್ದಾರೆ. ಆರೋಗ್ಯ ತುರ್ತುಸ್ಥಿತಿಯ ಈ ಕಠಿಣ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಈ ಆದೇಶವನ್ನು ಮಾನವೀಯ ಅಂತಃಕರಣದ ಧನ್ಯತಾಭಾವದೊಂದಿಗೆ ಅವರೆಲ್ಲ ಒಪ್ಪಿಕೊಂಡಿರುವಾಗ ಇವರಿಗೇಕೆ ಈ ಒಣ ಉಸಾಬರಿ ಎಂದು ಪ್ರಶ್ನಿಸಿದ್ದಾರೆ.
ಅದ್ಯಾವ ಒಳಹಿತಾಸಕ್ತಿ ಯಿಂದ ಈ ತರಹದ ಮನವಿ ಪತ್ರವನ್ನು ತಮಗೆ ಬರೆದು, ಈ ಮಾಜಿ ಶಾಸಕರು ಏನನ್ನು ಸಾಧಿಸಲು ಹೊರಟಿದ್ದಾರೆ? ಇವರು ಯಾರನ್ನು ಮೆಚ್ಚಿಸಲು ಹೊರಟಿರುವುದು? ಭಾರತ ಸರ್ಕಾರವೂ ಸಹ ಇಂತಹದೇ ಆದೇಶವನ್ನು ಹೊರಡಿಸಿದೆ. ಬಹುತೇಕ ಎಲ್ಲ ರಾಜ್ಯ ಸರ್ಕಾರಗಳು ಇಂತಹ ಕ್ರಮಗಳನ್ನು ಕೈಗೊಂಡಿವೆ. ಆದರೆ, ಮಾಜಿ ಎಮ್. ಎಲ್. ಸಿ. ಶಶಿಲ್ ನಮೋಶಿಯವರು ಮಾತ್ರ ಯಾವ ಯಾವುದೋ ಅಸಮರ್ಥನೀಯ ಕಾರಣಗಳನ್ನು ಮುಂದೆ ಮಾಡಿಕೊಂಡು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸರ್ಕಾರವನ್ನು ಮುಜುಗರಕ್ಕೆ ಒಳಪಡಿಸಿರುವುದು ನಿಜಕ್ಕೂ ವಿಷಾದನೀಯ. ಕೋವಿಡ್-೧೯ರ ಹಾವಳಿಯ ಗಂಭೀರತೆಯನ್ನು ನಮೋಶಿಯವರು ಅರಿತಿಲ್ಲವೇನೋ? ಅಥವಾ ತಿಳಿದು ತಿಳಿಯದಂತೆ ವರ್ತಿಸುತ್ತಿದ್ದಾರೆ ಎಂಬ ಸಂಶಯ ಪ್ರಾಜ್ಞ ವಲಯವನ್ನು ಕಾಡುತ್ತಿದೆ. ನಮೋಶಿಯವರು ಕೇವಲ ಮೂರು ದೀರ್ಘಾವಧಿಯ ಶಾಸಕರು ಮಾತ್ರವಲ್ಲ ; ಸಧ್ಯ, ಆಡಳಿತದಲ್ಲಿ ಇರುವ ಭಾರತೀಯ ಜನತಾ ಪಕ್ಷದ ರಾಜ್ಯ ಮಟ್ಟದ ಸಹ ವಕ್ತಾರ ಅಗಿ, ಮುಂಬರುವ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟ ಇವರ ಈ ’ನಡೆ ’ ಪ್ರಶ್ನಾರ್ಹ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಶ್ರೀಮತಿ ಹೀರಾ ಬೆಹನ್ ಅವರಂತಹ ಹಿರಿಯ ಜೀವ ತಾನು ದುಡಿದು ಉಳಿಸಿದ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ” Pಒ ಅಂಖಇS ” – ನಿಧಿಗೆ ನೀಡಿರುವ ಅನನ್ಯ ಉದಾಹರಣೆ ಇರುವಾಗ ; ನಮ್ಮ ಈ ಮಾಜಿ ಶಾಸಕರು – ಒಂದು ಒಳ್ಳೆಯ ಸದುದ್ದೇಶಕ್ಕಾಗಿ ಕಡಿತಗೊಳಿಸಿರುವ – ಮೂರು ತುಟ್ಟಿಭತ್ಯೆಗಳ ಅಧಿಕೃತ ಸರಕಾರಿ ಆದೇಶವನ್ನು ಸ್ಥಗಿತಗೊಳಿಸಿ, ಮರುಪರಿಶೀಲನೆ ಮಾಡಲು ಬರೆದಿರುವ ಮನವಿ ಪತ್ರದ ಒಳಹೇತು ಓಟಿನ ರಾಜಕೀಯವಲ್ಲದೇ, ಮತ್ತೇನು? ಎಂದು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here