ಕಾಯಕ ವೃತ್ತಿಗಳಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಸಿಎಂಗೆ ಮನವಿ: ದೇಗಾಂವ

0
24

ಕಲಬುರಗಿ: ಕಾಯಕ ವೃತ್ತಿಯ ದರ್ಜಿಗಳು, ಅಕ್ಕಸಾಲಿಗರು, ಬಡಿಗರು, ಕಮ್ಮಾರರು, ಕುಂಬಾರರು ಹೂ ಕಟ್ಟುವವರು, ಸೇರಿದಂತೆ ಇನ್ನಿತರರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಕರ್ನಾಟಕ ನವನಿರ್ಮಾಣ ಸೇನೆ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು ಎಂದು ಜಿಲ್ಲಾಧ್ಯಕ್ಷ ರವಿ ಎನ್. ದೇಗಾಂವ ಅವರು ತಿಳಿಸಿದ್ದಾರೆ.

ದೇಶದಲ್ಲಿ ಮಹಾಮಾರಿ ಕರೋನಾ ಕಾರಣದಿಂದಾಗಿ ಕಳೆದ ೪೫ ದಿನಗಳಿಂದ ಜನ ಜೀವನ ಅಸ್ಥವ್ಯಸ್ತಗೊಂಡಿದೆ. ಲಕ್ಷಾಂತರ ಜನ ದಿನಗೂಲಿ ಉದ್ಯೋಗ ಮಾಡಿಕೊಂಡೆ ಜೀವನ ನಡೆಸುತ್ತಿರುವವರ ಜೀವನ ಕಷ್ಟಕರವಾಗಿದೆ ಆದ್ದರಿಂದ ಕಾಯಕ ವೃತ್ತಗಳಿಗೆ ಮುಖ್ಯಮಂತ್ರಿಗಳು ವಿಶೇಷ ಪ್ಯಾಕೇಜ್‌ನ್ನು ಘೋಷಿಸಬೇಕೆಂದರು.

Contact Your\'s Advertisement; 9902492681

ರಾಜ್ಯದ ವೃತ್ತಿಪರ ಶ್ರಮಿಕ ವರ್ಗದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್ ನೀಡಿರುವುದು ಅತ್ಯಂತ ಶ್ಲಾಘನೀಯ ಹಾಗೂ ಸ್ವಾಗತಾರ್ಹವಾಗಿದೆ. ಈ ಕ್ರಮಕ್ಕೆ ಕರ್ನಾಟಕ ನವನಿರ್ಮಾಣ ಸೇನೆ ಕಲಬುರಗಿ ಜಿಲ್ಲಾ ಘಟಕವು ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದರು.

ಅದೇ ರೀತಿಯಾಗಿ ಕಾಯಕ ವೃತ್ತಿಯವರಾದ ದರ್ಜಿಗಳು (ಬಟ್ಟೆ ಹೊಲೆಯುವವರು) ಅಕ್ಕಸಾಲಿಗರು, ಬಡಿಗರು, ಕಮ್ಮಾರರು, ಕುಂಬಾರರು, ಹೂ ಕಟ್ಟುವವರು, ಸೇರಿದಂತೆ ಇತರರಿಗೂ ಸಹಿತ ವಿಶೇಷ ಪ್ಯಾಕೇಜ್ ನೀಡುವುದರ ಮೂಲಕ ಸರ್ಕಾರ ಅವರ ಬೆನ್ನಿಗೆ ನಿಲ್ಲಬೇಕೆಂದು ಸೇನೆ ಒತ್ತಾಯಿಸುತ್ತದೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here