ಕಲಬುರಗಿ: ಕೊರೊನಾ ವೈರಸ್ ಜಿಲ್ಲೆಯ ಅಫಜಲಪುರ ಮತ್ತು ಕಮಲಾಪುರ ತಾಲ್ಲೂಕಿಗೆ ತಲುಪಿರುವ ವರದಿ ಇಂದು ವೈದ್ಯಕೀಯ ಇಲಾಖೆಯಿಂದ ಹೊರಬಿದ್ದ ವರದಿಯಿಂದ ದೃಢ ಪಟ್ಟಿದೆ. ಜಿಲ್ಲೆಯಲ್ಲಿ ಪೀಡಿತರ ಸಂಖ್ಯೆ 70ಕ್ಕೆ ತಲುಪಿದೆ.
ತೀವ್ರ ಉಸಿರಾಟದ ತೊಂದರೆಯಿಂದ ಅಫಜಲಪುರದ 35 ವರ್ಷದ ಮತ್ತು ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ ಹೊಂದಿದ 30 ವರ್ಷದ ಹಾಗೂ ರೋಗಿ ಸಂಖ್ಯೆ ಪಿ604 ಯಿಂದ ಕಲಬುರಗಿಯ 72 ವರ್ಷದ ವ್ಯಕ್ತಿ ಕೊರೊನಾ ಪಾಜಿಟಿವ್ ಆಗಿದೆ ಎಂದು ದೃಢಪಟ್ಟಿದೆ.
ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಪಾಜಿಟಿವ್ ಪ್ರಕರಣಗಳು ದಾಖಲಾಗಿಲ್ಲ, ಜಿಲ್ಲೆಯ ಒಟ್ಟು 31 ಜನರು ಪೀಡಿತರ ಚಿಕಿತ್ಸೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಎಂಬುದು ಮಾಹಿತಿ ಸಿಕ್ಕಿದೆ. ಅದೇ ರೀತಿ 6 ಮಂದಿ ವೈರಸ್ ಗೆ ಬಲಿಯಾಗಿದ್ದಾರೆ.
ಪೀಡಿತರಿಗೆ ನಿಗದಿತ ಕಲಬುರಗಿ ಇ.ಎಸ್.ಐ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೇ 17 ವರೆಗೆ ಲಾಕ್ ಡೌನ್ ಜಾರಿಯಲ್ಲಿದ್ದು, ಅಗತ್ಯ ವಸ್ತುಗಳ ಖರೀದಿಗಾಗಿ ಮನೆಯಿಂದ ಹೊರೆಗೆ ತೆರಳುವರು ಮುಂಜಾಗ್ರತೆ ಕ್ರಮವಾಗಿ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಹೊರಗೆ ಬರಬೇಕೆಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.