ಬಡ ತಾಯಿಯ ಕುಟುಂಬಕ್ಕೆ ದಿನಸಿ ಕಿಟ್ ವಿತರಿಸಿ ವಿಶೇಷ ತಾಯಂದಿರ ದಿನ ಆಚರಣೆ

0
48

ಸುರಪುರ: ತಾಲೂಕಿನ ಕನ್ನೆಳ್ಳಿ ಗ್ರಾಮದಲ್ಲಿರುವ ಬಸವಲಿಂಗಮ್ಮ ಯಮನಪ್ಪ ವಕ್ರಾಣಿ ಎಂಬುವವರ ಬಡ ಕುಟುಂಬದಲ್ಲಿ ನಾಲ್ವರು ಅಂಗವಿಕಲರಿದ್ದು ತೀವ್ರ ಸಂಕಷ್ಟ ಹೆದರಿಸುತ್ತಿದೆ.ಇಂತಹ ಕುಟುಂಬಕ್ಕೆ ವಿಶ್ವ ತಾಯಂದಿರ ದಿನದ ಅಂಗವಾಗಿ ದಿನಸಿ ಕಿಟ್ ವಿತರಿಸಿ ಪೊಲೀಸ್ ಪೇದೆಯೊಬ್ಬರು ಮಾನವೀಯತೆ ಮೆರೆದಿದ್ದಾರೆ.

ಬಸವಲಿಂಗಮ್ಮ (೬೫ ವರ್ಷ) ಎಂಬ ಹೆಣ್ಣು ಮಗಳಿಗೆ ಆರು ಜನ ಮಕ್ಕಳಿದ್ದು ಗಂಡ ಯಮನಪ್ಪ ಹತ್ತು ವರ್ಷಗಳ ಹಿಂದೆ ತೀರಿಕೊಂಡಿದ್ದಾನೆ.ಆರು ಜನ ಮಕ್ಕಳಲ್ಲಿ ನಾಲ್ಕು ಜನ ಮಕ್ಕಳು ಅಂಗವಿಕಲರು.ಒಬ್ಬ ಮಗ ಶಿವಕುಮಾರ ಮಾತ್ರ ಚೆನ್ನಾಗಿದ್ದು ಈತನೊಬ್ಬನೆ ಸದ್ಯ ದುಡಿಯುವುದು,ಇನ್ನುಳಿದ ಒಬ್ಬ ಹೆಣ್ಣು ಮಗಳು ಚೆನ್ನಾಗಿದ್ದರು ಮನೆಯಲ್ಲಿದ್ದಾರೆ.ಇನ್ನುಳಿದ ನಾಲ್ಕು ಜನರಲ್ಲಿ ಮೂರು ಜನ ಗಂಡು ಮಕ್ಕಳು ಹಾಗು ಒಬ್ಬಳು ಹೆಣ್ಣು ಮಗಳು ನಾಲ್ವರು ಅಂಗವಿಕಲರು.ಈ ನಾಲ್ವರನ್ನು ಕಳೆದ ಇಪ್ಪತ್ತೈದು ವರ್ಷಗಳಿಂದ ತಾಯಿ ಬಸವಲಿಂಗಮ್ಮನೆ ಲಾಲನೆ ಪಾಲನೆ ಮಾಡುತ್ತಾ ಬೆಳೆಸುತ್ತಿದ್ದಾಳೆ.

Contact Your\'s Advertisement; 9902492681

ನಾಲ್ವರ ದೈನಂದಿನ ಚಟುವಟಿಕೆಗಳೆಲ್ಲವನ್ನೂ ಮಹಾತಾಯಿ ಬಸವಲಿಂಗಮ್ಮನೆ ಮಾಡಿಸುವ ಮೂಲಕ ತನ್ನೆಲ್ಲ ನೋವು ನಲಿವು ಎಲ್ಲವನ್ನೂ ಮಕ್ಕಳ ಸೇವೆಯಲ್ಲಿಯೆ ಕಾಣುತ್ತಿದ್ದಾಳೆ.ಅಂಗವಿಕಲರಿಗೆ ಸರಕಾರದ ಮಾಶಾಸನ ಬಿಟ್ಟರೆ ಬೇರಾವ ನೆರವು ದೊರೆತಿಲ್ಲ.ತ್ರಿಚಕ್ರ ವಾಹನ ನೀಡಿದ್ದಾರಾದರೂ ಬದುಕಿಗೆ ಆಸರೆಯಾಗಲು ಯಾವ ನೆರವು ಇಲ್ಲವೆಂದು ಕಣ್ಣೀರು ಸುರಿಸುತ್ತಿದ್ದಾಳೆ ತಾಯಿ.ಇವರ ನೆರವಿಗೆ ಜನಪ್ರತಿನಿಧಿಗಳು ಹಾಗು ಸರಕಾರ ನಿಂತು ಏನಾದರು ವ್ಯವಸ್ಥೆಯಾಗಲಿ ಅಥವಾ ಸರಕಾರಿ ನೌಕರಿಯಾಗಲಿ ಕೊಡಬೇಕೆಂದು ವಿನಂತಿಸುತ್ತಾರೆ ಬೈಚಬಾಳ ಗ್ರಾಮ ಪಂಚಾಯತಿ ಅಧ್ಯಕ್ಷ ನಿಂಗಣ್ಣ ಗೋಡ್ಯಾಳಕರ್.

ಈ ಕುಟುಂಬದ ಕಷ್ಟದ ಸ್ಥಿತಿಯನ್ನು ಕಂಡು ಸುರಪುರ ಠಾಣೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿರುವ ದಯಾನಂದ್ ಜಮಾದಾರ್ ಅಕ್ಕಿ ಜೋಳ ಸಕ್ಕರೆ ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಕಿಟ್ ವಿತರಿಸಿ ವಿಶ್ವ ತಾಯಂದಿರ ದಿನದ ಸಂದರ್ಭದಲ್ಲಿ ಇಂತಹ ತಾಯಿಯ ಕುಟುಂಬಕ್ಕೆ ಅಲ್ಪ ಸಹಾಯ ಮಾಡಿದ್ದು ಹೆಮ್ಮೆಯ ಸಂಗತಿ ಎನಿಸುತ್ತಿದೆ ಎಂದರು ಪೇದೆ ದಯಾನಂದ್.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here