ಚಿಕ್ಕಬಳ್ಳಾಪುರ: ನಗರದ ಡಾಕ್ಟರ್ ಎ.ಪಿ.ಜೆ .ಅಬ್ದುಲ್ ಕಲಾಂ ಗ್ರಂಥಾಲಯದ ಮುಂಭಾಗದಲ್ಲಿ ಗಿಡ ನೆಡುವ ಮೂಲಕ ವಿಶ್ವ ಅಮ್ಮಂದಿರ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಆಶಾ ಫೌಂಡೇಶನ್ ಸಂಸ್ಥೆ ಯ ಸಂಸ್ಥಾಪಕ ಕಾರ್ಯದರ್ಶಿ ಆಶಾ ಮಂಚನಬಲೆ ಅವರು ಮಾತನಾಡಿ,ನಗರ ,ಹಳ್ಳಿ ಪ್ರದೇಶಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದು,ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ತಾಪಮಾನವನ್ನು ಕಂಡಿದ್ದು ಜನತೆಯು ಬಿಸಿ ಗಾಳಿಗೆ ತತ್ತರಿಸಿ ಹೋಗಿದ್ದಾರೆ ಗಿಡ ನೆಟ್ಟು ಬೆಳೆಸಿ ತಂಪಾದ ಗಾಳಿ ಯನ್ನೂ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದರು.
ಕೋರೋಣ ಸೈನಿಕ ತಂಡದ ತಾಲ್ಲೂಕು ಸಂಯೋಜಕರಾದ ಸ್ಟುಡಿಯೋ ಶ್ರೀನಿವಾಸ ಮಾತನಾಡಿ, ವಿಶ್ವದಾದ್ಯಂತ ಇಂದು ಅಮ್ಮನ ನೆನಪು,ಅಮ್ಮಂದಿರ ದಿನವನ್ನು ಅತೀ ಆತ್ಮೀಯವಾಗಿ , ಪ್ರೀತಿಯಿಂದ ,ಮಮತೆಯ ಮಡಿಲಲ್ಲಿ ಆಚರಿಸಿ ಸಂಭ್ರಮಿಸುತ್ತಿರುತ್ತಾರೆ ಹಾಗೇ ನಾವು ಈ ಅಮ್ಮಂದಿರ ದಿಂದ ಸವಿನೆನಪಿಗಾಗಿ ನಮ್ಮ ಕೋರೋಣ ಸೈನಿಕರಿಂದ ಒಂದೊಂದು ಗಿಡ ನೆಟ್ಟು ನೀರು ಹಾಕಿ ಬೆಳೆಸುತ್ತೇವೆ ಎಂದು ಪ್ರಮಾಣ ವಚನ ವನ್ನ ಸ್ವೀಕರಿಸುವ ಮೂಲಕ ಅಮ್ಮಂದಿರ ದಿನವನ್ನು ಆಚರಿಸಿ ಸಂತೋಷ ಪಡಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪರಿಸರ ಪ್ರೇಮಿ ಶ್ರೀ ಸಾಯಿ ಗಂಗಾ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಾದ ಗಂಗಾಧರ ಕೆ . ಟಿ. ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮಲ್ಲರ ಹೊಣೆ,ಪರಿಸರ ವಿದ್ದರೆ ನಾಡು ಸಂಪತ್ ಭರಿತ ವಾಗಿರುತ್ತದೆ, ನಾಡಿನ ಜನತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕೋರೋಣ ಸೈನಿಕ ರಾದ ಮುರಳೀಧರ, ಮೋಹನ್ ಕುಮಾರ್ ಗೌಡ,ಪ್ರಜ್ವಲ್,ಶೇಖರ್, ಮೋಹಿತ್,ಶ್ರೀನಾಥ್, ಗಿರೀಶ್, ಸೀನು ಮತ್ತಿತರರು ಉಪಸ್ಥಿತರಿದ್ದರು.