ಕೋವಿಡ್-19 ಕ್ವಾರಂಟೈನ್ ಕೇಂದ್ರ ಆರಂಭಕ್ಕೆ ವಿರೋಧ

0
157

ಕಲಬುರಗಿ: ಇಲ್ಲಿನ ರಾಮಮಂದಿರ ಸಮೀಪದ ಧರಿಯಾಪುರ-ಕೋಟನೂರ ಜಿಡಿಎ ಲೇಔಟ್ ನಲ್ಲಿ ಹೊಂ ಕ್ವಾರಂಟೈನ್ ಕೇಂದ್ರ ಆರಂಭಿಸದಂತೆ ಸ್ಥಳೀಯರು ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿ ವಿರೋಧಿಸಿದರು.

ಧರಿಯಾಪುರ-ಕೋಟನೂರ ಜಿಡಿಎ ಲೇಔಟ್‍ನಲ್ಲಿರುವ ವಸತಿ ಗೃಹಗಳಲ್ಲಿ ರಾಜ್ಯ ಮತ್ತು ಹೊರರಾಜ್ಯದ ಕೋವಿಡ್-19 ಶಂಕಿತರನ್ನು ಸ್ಥಳವಕಾಶ ಮಾಡಿಕೊಡಲಾಗುತ್ತಿದೆ. ಹಾಸ್ಟೆಲ್‍ಗಳ ಸುತ್ತಮುತ್ತ ಸಾಕಷ್ಟು ಮನೆಗಳಲ್ಲಿ ಜನವಾಸವಾಗಿದ್ದಾರೆ. ಇದು ಸೋಂಕು ರಹಿತ ಬಡಾವಣೆಯಾಗಿದೆ.

Contact Your\'s Advertisement; 9902492681

ಸ್ವಚ್ಚ ಮತ್ತು ನಿರಾತಂಕ ಹೊಂದಿರುವ ಬಡಾವಣೆಯಲ್ಲಿ ಶಂಕಿತರು ಹಾಗೂ ಕೂಲಿಕಾರ್ಮಿಕರನ್ನು ಹೋಂಕ್ವಾರಂಟೈನ್ ಮಾಡುವುದು ಬೇಡ. ಇಲ್ಲಿ ಆರಂಭಿಸಲು ಉದ್ದೇಶಿಸಿದ ಕ್ವಾರಂಟೈನ್ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಶರಣಗೌಡ ನಾಗಶೆಟ್ಟಿ, ಭೀಮರಾರ ತೆಗನೂರ, ಶಶಿಧರ ಚಿಂಚೋಳಿ,ಡಾ.ಅಂಬ್ರೇಶ್ ಕೋಳಕೂರ್,ದೇವು ತಾರಫೈಲ್, ಅಂಬಿಕಾ ಪಾಟೀಲ್, ಸೀಮಾ, ಶೀಲ್ಪಾ, ರೂಪಾ, ಮತ್ತಿತರರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here