ಕಲಬುರಗಿ: ಇಲ್ಲಿನ ಶಹಾಬಾದ ಹೊನಗುಂಟಾ ಗ್ರಾಪಂಯಲ್ಲಿ ಜಾಬ್‍ಕಾರ್ಡಗಾಗಿ ಅರ್ಜಿ ಸಲ್ಲಿಸಿ ತಿಂಗಳಾದರೂ ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ಹೊನಗುಂಟಾ ಗ್ರಾಮದ ಕೂಲಿ ಕಾರ್ಮಿಕರು ಸೋಮವಾರ ತಟ್ಟೆ ತಟ್ಟುವ ಮೂಲಕ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡಿ, ಹೊನಗುಂಟಾ ಗ್ರಾಮದ ಬಡ ಕೂಲಿ ಕಾರ್ಮಿಕರಿಗೆ ಜಾಬ್‍ಕಾರ್ಡಗಾಗಿ ಅರ್ಜಿ ಸಲ್ಲಿಸಿದ ಕೂಲಿ ಕಾರ್ಮಿಕರಿಗೆ ನರೇಗಾಯೋಜನೆಯಡಿ ಕೆಲಸ ನೀಡಬೇಕೆಂದು ಈಗಾಗಲೇ ಗ್ರಾಪಂ ಪಿಡಿಓ ಅವರಿಗೆ ಮನವಿ ಸಲ್ಲಿಸಲಾಯಿತು.
ಆದರೆ ಪಿಡಿಓ ನಿರ್ಲಕ್ಷ್ಯತನ ತೋರುತ್ತಿರುವುದರಿಂದ ಕೆಲಸವಿಲ್ಲದೇ ಪರದಾಡುವಂತ ಪರಿಸ್ಥಿತಿ ಬಂದಿದೆ. ಬಹುತೇಖ ಗ್ರಾಪಂಗಳಲ್ಲಿ ಕೂಲಿಕಾರ್ಮಿಕರಿಗೆ ನರೇಗಾದಲ್ಲಿ ಕೆಲಸ ನೀಡಿದ್ದಾರೆ.ಆದರೆ ನಮ್ಮ ಗ್ರಾಪಂಯಲ್ಲಿ ನಾವು ಜಾಬ್‍ಕಾರ್ಡಗಾಗಿ ಅರ್ಜಿ ಸಲ್ಲಿಸಿ ತಿಂಗಳ ನಂತರವೂ ನಮ್ಮ ಜಾಬ್‍ಕಾರ್ಡ ಮಾಡಿಲ್ಲ.ಅಲ್ಲದೇ ಕೆಲಸಕ್ಕೂ ತೆಗೆದುಕೊಂಡಿಲ್ಲ. ಲಾಕ್‍ಡೌನ್ ಆಗಿದ್ದರಿಂದ ಕೆಲಸವೂ ಇಲ್ಲ ಮತ್ತು ಆಹಾರವೂ ಇಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದೆವೆ. ಈಗಾಗಲೇ ಕರ್ನಾಟಕ ಪ್ರಾಂತ ರೈತ ಸಂಘದಿಂದ ಪಿಡಿಓ ಅವರಿಗೆ ಮನವಿ ಸಲ್ಲಿಸಲಾಗಿತ್ತು.
ಒಂದು ವೇಳೆ ಕೆಲಸ ನೀಡದಿದ್ದರೇ ತಟ್ಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದ್ದೆವು.ಆದರೆ ನಮಗೆ ಕೆಲಸ ನೀಡದ ಕಾರಣ ತಟ್ಟೆ ತಟ್ಟುವ ಮೂಲಕ ಪ್ರತಿಭಟನೆ ಮಾಡಬೇಕಾದ ಸಂದರ್ಭ ಬಂದಿದೆ. ಕೂಡಲೇ ನಮ್ಮ ಬಡವರ ಕೂಗು ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಆಲಿಸಿ, ಕೆಲಸ ನೀಡುವತ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕಾ ಸಂಚಾಲಕ ರಾಯಪ್ಪ ಹುರಮುಂಜಿ, ದೇವಿಂದ್ರ ಬೆಣ್ಣೂರ್, ಸಂಗಣ್ಣಗೌಡ, ಸರಸ್ವತಿ ಗುಂಡಪ್ಪ, ನಿಂಗಮ್ಮ ದೇವಿಂದ್ರ ಬೆಣ್ಣೂರ, ಕಸ್ತೂರಿಬಾಯಿ, ಶರಣಪ್ಪ ಬಾಳಕ, ಚಂದ್ರಾಮ, ಹಲಕಟ್ರ್ಟಿ, ರಾಜು ಚಾರ್ಕಿ ಇತರರು ಇದ್ದರು.