ಕಲಬುರಗಿ: ವಿವಿಧ ಖಾಸಗಿ ಅಸ್ಪತ್ರೆ ಗಳಲ್ಲಿ ನರ್ಸ್ ಆಗಿ ಕೆಲಸ ಮಾಡುವ ದಾದಿಯರುರನ್ನು ಇಂದು ವಿಶ್ವ ದಾದಿಯರ ದಿನದ ನಿಮಿತ್ತ ಆಹಾರ ಕಿಟ್ ವಿತರಿಸುವ ಮೂಲಕ ಆಚರಿಸಲಾಯಿತು.
ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರದೇ ಸೇವೆ ಸಲ್ಲಿಸುತ್ತಿರು ಕಿರಣ ಆಸ್ಪತ್ರೆಯ ನರ್ಸ್ ಆಗಿರುವ ಶರಣ್ಣಮ್ಮಾ ಎಂ. ಕಿವಡೆ, ಬಬಿತಾ ಸೇರಿ 11 ಜನ ದಾದಿಯರಿಗೆ ದಿ. ಚಂದ್ರಶೇಖರ್ ಪಾಟೀಲ ಅಭಿಮಾನಿ ಬಳಗದ ವತಿಯಿಂದ ತಯಾರಿಸಿದ ಕಿಟ್ ಗಳನ್ನು ಕೊಟ್ಟು ಗೌರವಿಸಲಾಯಿತು.
ದಕ್ಷಿಣ ಮತಕ್ಷೇತ್ರದ ಯುವ ಶಾಸಕರಾದ ಅಪ್ಪುಗೌಡ (ದತ್ತಾತ್ರೇಯ ಪಾಟೀಲ )ರ ಅಭಿಮಾನಿ ಚಿ. ಶರಣಪ್ರಸಾದ ವಿ. ಜೆನ್ವೇರಿ ಅವರು ಇದ್ದರು.