ಸುರಪುರ: ನಗರದ ಆಸರ ಮೊಹಲ್ಲಾದ ಇಬ್ಬರು ದಂಪತಿಗಳಿಗೆ ಕೊರೊನಾ ದೃಢವಾದ ಹಿನ್ನೆಲೆ ಇಡೀ ನಗರವೇ ಸಂಪೂರ್ಣ ಲಾಕ್‌ಡೌನ್ ಆಗಿದೆ.
ನಗರದ ಆಸರ ಮೊಹಲ್ಲಾದ ಇಬ್ಬರು ದಂಪತಿಗಳು ಮತ್ತು ಒಬ್ಬ ಮಗ ಛತ್ರಿ ಖಕಳರೀದಿಗೆಂದು ಗುಜರಾತ್‌ನ ಅಲ್ಲಾ ನಗರಕ್ಕೆ ಮಾರ್ಚ್ 21 ರಂದು ಹೋಗಿದ್ದು 23ಕ್ಕೆ ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾದ ಹಿನ್ನೆಲೆ ಮೇ 5ನೇ ತಾರೀಖಿನ ವರೆಗೆ ಗುಜರಾತ್‌ನಲ್ಲಿದ್ದು 6ನೇ ತಾರೀಖು ಅಲ್ಲಿಂದ ಹೊರಟು 9ನೇ ತಾರೀಖು ಹುನಗುಂದ ತಲುಪಿದ್ದು ಅಲ್ಲಿಂದ ನೇರವಾಗಿ ಸುರಪುರ ಆಸ್ಪತ್ರೆಗೆ ಬಂದಿದ್ದಾರೆ.
9ನೇ ತಾರೀಖು ಈ ಮೂರು ಜನರನ್ನು ಕ್ವಾರಂಟೈನ್‌ಲ್ಲಿ ಇರಿಸಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದು, ಇಂದು ಇಬ್ಬರು ದಂಪತಿಗಳಿಗೆ ಕೊರೊನಾ ಸೊಂಕು ದೃಢಪಟ್ಟಿದ್ದು ,ಇವರ ಮಗ ಮತ್ತು ಹುನಗುಂದದಿಂದ ಕರೆ ತಂದ ಕಾರ್ ಚಾಲಕರ ವರದಿ ನೆಗೆಟಿವ್ ಬಂದಿದ್ದರಿಂದ ಈ ಇಬ್ಬರನ್ನು ಸುರಪುರದ ನಿಷ್ಠಿ ಇಂಜಿನಿಯರಿಂಗ್ ಕಾಲೇಜಿನ ಕ್ವಾರಂಟೈನ್‌ಲ್ಲಿ ಉಳಿಸಲಾಗಿದೆ.
ಇಬ್ಬರು ದಂಪತಿಗಳ ಸೊಂಕಿನ ಬಗ್ಗೆ ಪಾಸಿಟಿವ್ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿಗಳು ಜಿಲ್ಲೆಯಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿದ್ದು,ರಾತ್ರಿ 2 ಗಂಟೆಯಿಂದ ನಗರಸಭೆ ಸಿಬ್ಬಂದಿ ನಗರದಲ್ಲಿ ಪ್ರಚಾರ ಮಾಡುತ್ತಿದ್ದಂತೆ ನಗರದ ಜನ ಬೆಳಗಾಗುವುದರಲ್ಲಿ ಭಯಭೀತರಾಗಿದ್ದು ಇಡೀ ನಗರ ಸಂಪೂರ್ಣ ಲಾಕ್‌ಡೌನ್ ಆಗಿದೆ.
ಈಗ ಇಬ್ಬರು ಕೊರೊನಾ ಪಾಸಿಟಿವ್ ಎಂದು ಸರ್ಕಾರ ಅಧೀಕೃತವಾಗಿ ಘೋಷಣೆ ಮಾಡಿದ್ದು P-867 P-868 ಸಂಖ್ಯೆ ನೀಡಲಾಗಿದೆ.