ಶಹಾಬಾದ: ನಗರದ ಆಲ್ ಇಂಡಿಯಾ ಡೆಮಾಕ್ರೇಟಿಕ್ ಯೂತ್ ಆರ್ಗನೈಜೆಷನ್ ಜಿಲ್ಲಾ ಸಮಿತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನೆಯಿಂದಲೇ ಆಗ್ರಹಿಸಿಸಲಾಯಿತು.
ಲಾಕ್‍ಡೌನ್‍ನಿಂದ ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೋವಿಡ್ 19 ಹೋರಾಟಗಾರರಿಗೆ ಮಾಸ್ಕ್ ಹಾಗೂ ಸುರಕ್ಷಿತ ಕಿಟ್‍ಗಳನ್ನು ನೀಡಬೇಕು. ಪರಿಕ್ಷೇ ಉಚಿತಗೊಳಿಸಬೇಕು. ವಲಸೆ ಕಾರ್ಮಿಕರಿಗೆ, ದಿನಗೂಲಿಗಳು, ಇ ಕಾಮರ್ಸ ಕಾರ್ಮಿಕರನ್ನು ರಕ್ಷಣೆ ನೀಡುವುದರ ಜತೆಗೆ, ಕಾರ್ಮಿಕರ ಉದೋಗ್ಯ ರಕ್ಷಿಸಬೇಕುಹಾಗೂ ಪೂರ್ಣವೇತನ ನೀಡಬೇಕು.ಅರೆಕಾಲಿಕ ಉಪನ್ಯಾಸಕ, ಅನುದಾನ ರಹಿತ ಶಾಲೆಯ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಸಹಾಯ ಧನ ನೀಡಬೇಕು. ಗೋದಾಮುಗಳಲ್ಲಿ ಕೊಳೆಯುತ್ತಿರುವ 77 ದಶಲಕ್ಷ ಟನ್ ಆಹಾರ ಧಾನ್ಯವನ್ನು ಹಸಿದವರಿಗೆ ಹಂಚಬೇಕು. ನಿರೋದ್ಯೋಗಿಗಳಿಗೆ ಮತ್ತು ಜನ್‍ಧನ್ ಖಾತೆದಾರರಿಗೆ ಮುಂದಿನ ಕನಿಷ್ಟ 6 ತಿಂಗಳು ಮಾಸಿಕ ರೂ.5000ಸಹಾಯ ಪ್ಯಾಕೇಜ್ ನೀಡಬೇಕು. ನರೆಗಾ ಅಡಿಯಲ್ಲಿ ಕನಿಷ್ಟ ದುಡಿಯುವ ದಿನಗಳ ಸಂಖ್ಯೆಯನ್ನು 200ದಿನಗಳಿಗೆ ಏರಿಸಬೇಕು ಎಂದು ಒತ್ತಾಯಿಸಲಾಯಿತು.
ಎಐಡಿವೈಓ ಜಿಲ್ಲಾ ಅಧ್ಯಕ್ಷ ನಿಂಗಣ್ಣ ಜಂಬಗಿ, ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ.ಎಸ್.ಎಚ್ ರವರು ಬೇಡಿಕೆಗಳ ಫಲಕ ಹಿಡಿದು ಸರ್ಕಾರಕ್ಕೆ ಒತ್ತಾಯಿಸಿದರು.