ಕಲಬುರಗಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ವಿಷೇಶ ಪ್ಯಾಕೇಜ್ ಘೋಷಿಸುವ ಮೂಲಕ ಸ್ವದೇಶಿ, ಗುಡಿ ಕೈಗಾರಿಕೆಗೆ ಪುನರ್ ಉತ್ತನ್ನ ದ ಬಗ್ಗೆ ದೇಶಕ್ಕೆ ಅರಿವು ಮೂಡಿಸಿದ ದೇಶದ ಆರ್ಥಿಕ ಅಭಿವೃದ್ಧಿ ಸಂದೇಶ ನೀಡಿರುವ ಪಿಎಂಗೆ ಕರ್ನಾಟಕ ನೇಕಾರ ಬಿಜೆಪಿ ಮೋರ್ಚಾ ಮಹಾ ನಗರ ಘಟಕದ ಸಂಚಾಲಕ ನ್ಯಾಯವಾದಿ ವಿನೋದ ಕುಮಾರ ಜೆ ಅಭಿನಂದಿಸಿದ್ದಾರೆ.
ಕಳೆದ 5 ವರ್ಷದ ಹಿಂದೆ ಖಾದಿ ಮತ್ತು ಕೈಮಗ್ಗದ ಉತ್ತಪನ್ನ ಗಳನ್ನು ಉಪಯೋಗಿಸಿಕೊಂಡು ದೇಶ ಬೆಳೆಯಲಿ ಎಂದು ಪುನರ ಉಚ್ಚರಿಸಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹೇಳಿ, ಸ್ವದೇಶಿ ಬಳಸಿ+ದೇಶ ಉಳಿಸಿ ಎನ್ನುವ ಸಂಕಲ್ಪ ಮೂಡಿಸಿ ಹೊಸ ಧೇಯ್ಯಕ್ಕೆ ಮುನ್ನಡಿ ಬರೆದಿದ್ದಾರೆ ಎಂದು ತಿಳಿಸಿದ್ದಾರೆ.