ಪಿಎಂ ಪ್ಯಾಕೇಜ್ ದೇಶದ ಕೈಗಾರಿಕಾ ಕ್ಷೇತ್ರದ ಚೇತರಿಕೆಗೆ ವೇಗ ನೀಡಲಿದೆ: ಸಚಿವ ಜಗದೀಶ್ ಶೆಟ್ಟರ್

0
20

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್‌ ದೇಶದ ಕೈಗಾರಿಕಾ ಕ್ಷೇತ್ರದ ಅಭಿವೃದ್ದಿಗೆ ವೇಗ ನೀಡಲಿದೆ. ಇದೇ ವೇಳೆ ಗುಡಿ, ಗೃಹ, ಸಣ್ಣ, ಮಧ್ಯಮ ಹಾಗೂ ಬೃಹತ್‌ ಕೈಗಾರಿಕೆಗಳ ಚೇತರಿಕೆ ಅಗತ್ಯ ಜೀವವಾಯುವನ್ನು ಪೂರೈಸಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಪ್ರತಿಕ್ರಿಯಿಸಿದ್ದಾರೆ.

ಕರೋನಾ ಮಹಾಮಾರಿಯ ಲಾಕ್‌ ಡೌನ್‌ ಸಂಧರ್ಭದಲ್ಲಿ ಈ ರೀತಿಯ ವಿಶೇಷ ಪ್ಯಾಕೇಜ್‌ನ ಅವಶ್ಯಕತೆ ಬಹಳಷ್ಟಿತ್ತು. ಅದರಲ್ಲೂ ಲಾಕ್‌ ಡೌನ್‌ ನಿಂದಾಗಿ ತೊಂದರೆಗೆ ಈಡಾಗಿದ್ದ ಕೈಗಾರಿಕಾ ವಲಯದ ಚೇತರಿಕೆಗೆ ವಿಶೇಷ ವಾದಂತಹ ಸೌಲಭ್ಯ ನೀಡುವುದು ಅಗತ್ಯವಾಗಿತ್ತು. ಈ ನಿಟ್ಟಿನಲ್ಲಿ ನಮ್ಮ ದೇಶದ ಜಿಡಿಪಿಯ ಶೇಕಡಾ 10 ರಷ್ಟು ಮೌಲ್ಯದ ಪ್ಯಾಕೇಜ್‌ ಘೋಷಣೇ ನೀಡಿರುವುದು ಒಳ್ಳೆಯ ಬೆಳವಣಿಗೆ ಆಗಿದೆ. ಮುಂಬರುವ ದಿನಗಳಲ್ಲಿ ಕೇಂದ್ರದ ಆರ್ಥಿಕ ಸಚಿವರು ನೀಡುವ ಯೋಜನೆಯ ರೂಪು ರೇಷೆಗಳು ಇನ್ನಷ್ಟು ಆಶಾದಾಯಕವಾಗಿರಲಿವೆ ಎಂದು ಹೇಳಿದರು.

Contact Your\'s Advertisement; 9902492681

ಭಾರತ ಜಾಗತಿಕ ಶಕ್ತಿ ಆಗಲು ಒಳ್ಳೆಯದಾದಂತಹ ಪ್ಯಾಕೇಜ್‌ ಇದಾಗಿದೆ. ಸ್ಥಳಿಯವಾಗಿ ಉತ್ಪಾದನೆಗೆ ಹೆಚ್ಚಿನ ಬಲ ನೀಡುವ ಮೂಲಕ, ಆತ್ಮ ನಿರ್ಭರ ಭಾರತ್‌ ಯೋಜನೆ ದೇಶದ ಎಲ್ಲಾ ವರ್ಗದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಿದೆ ಎಂದು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here