ಕಲಬುರಗಿ: ಆಳಂದ ತಾಲೂಕಿನಲ್ಲಿ ಬರುವ ಚಿಂಚನಸೂರ, ಹೋಡಲ್, ಅಪಚಂದ, ವಿ.ಕೆ ಸಲಗರ, ಕಮಲಾನಗರ, ಬೋಧನ ಗ್ರಾಮಗಳಲ್ಲಿ ಕರ್ನಾಟಕ ಕೃಷಿ ಕೂಲಿ ಕಾರ್ಮಿಕರರ ಸಂಘದ ಅಧ್ಯಕ್ಷೆ ಜಯಶ್ರೀ ಕಟ್ಟಿಮನಿ ನೇತೃತ್ವದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕೆರೆ ಹೂಳೆತ್ತುವ ಕಾಮಗಾರಿಯನ್ನು ಜಿ.ಪಂ. ಉಪ ಕಾರ್ಯದರ್ಶಿ ಎಂ.ಡಿ.ಇಸ್ಮಾಯಿಲ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಹೂಳೆತ್ತುವರಿಗೆ ಸಂಘದ ವತಿಯಿಂದ ಮಾಸ್ಕ್ ವಿತರಿಸಿ ಮಾತನಾಡುತ್ತಾ ಕೂಲಿಕಾರರಿಗೆ ಸಿಗುವ ಕೂಲಿ, ಎಷ್ಟು ದಿನಗಳಿಂದ ಕೆಲಸ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದರು ಮತ್ತು ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದ್ದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧಿಕಾರಿ ವಿಜಯ ಸನ್ನದಿ, ಪಿಡಿಓ ಅಮೀತ, ಮೋಹನ ಎಂ.ಕಟ್ಟಿಮನಿ, ಶಾಂತಬಾಯಿ, ರತ್ನಬಾಯಿ, ಅಮೃತ ಕೋಟೆ, ಸಾವಿತ್ರಿ ಹೋಡಲ್, ಸರಸ್ವತಿ ಜಮಾದಾರ, ಪೀರಸಾಬ ಬೀದರ, ಸೂವರ್ಣ ಹೋಸಮನಿ ಇದ್ದರು.