ಸುರಪುರ: ಕೋವಿಡ್-19 ಕರ್ತವ್ಯ ಮೇಲೆ ಸೇವಾ ನಿರತ ಗ್ರಾಮ ಲೆಕ್ಕಿಗರ ಮೇಲೆ ಪೊಲೀಸ್ ಇಲಾಖೆ ಸಿಬ್ಬಂದಿ ದೈಹಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಕಂದಾಯ ಇಲಾಖೆ ಸಂಘ ಮತ್ತು ಗ್ರಾಮ ಲೆಕ್ಕಿಗರ ಸಂಘದಿಂದ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ದೇವತ್ಕಲ್ ಗ್ರಾಮ ಲೆಕ್ಕಿಗ ಪ್ರತಾಪ ಎಂಬುವವರು ಹುಣಸಗಿ ತಹಸೀಲ್ದಾರರ ಆದೇಶದಂತೆ ದಿನದ 24 ಗಂಟೆಗಳ ಕರ್ತವ್ಯ ನಿರತನಾಗಿದ್ದು,ಮಂಗಳವಾರ ಬೆಳಿಗ್ಗೆ ಕರ್ತವ್ಯದ ಮೇಲೆ ಸುರಪುರಕ್ಕೆ ಬಂದವರ ಮೇಲೆ ಮಹಾತ್ಮ ಗಾಂಧಿ ವೃತ್ತದಲ್ಲಿ ಪೊಲೀಸರು ಮನಬಂದಂತೆ ದೈಹಿಕ ಹಲ್ಲೆ ನಡೆಸಿದ್ದಾರೆ. ಪ್ರತಾಪರ ಬೈಕ್ ಮೇಲೆ ಕೋವಿಡ್-19 ಪಾಸ್ ಅಂಟಿಸಲಾಗಿದೆ.ಇದನ್ನು ನೋಡಿಯೂ ಹಲ್ಲೆ ನಡೆಸಿ ರಕ್ತ ಕಂದುಗಟ್ಟುವಂತೆ ಹೊಡೆದಿದ್ದಾರೆ.ಹಾಗೂ ಕೋವಿಡ್-19 ಕರ್ತವ್ಯಕ್ಕೂ ಅಡ್ಡಿ ಮಾಡಿದ್ದಾರೆ. ಇದರಿಂದ ಪ್ರತಾಪ ಮಾನಸಿಕವಾಗಿ ತುಂಬಾ ಹಿಂಸೆಗೊಂಡಿದ್ದಾನೆ.
ಅದೇರೀತಿಯಾಗಿ ಕೆಂಭಾವಿಯಲ್ಲಿ ಜಗದೀಶ ಮಾಲಹಳ್ಳಿ ಗ್ರಾಮ ಲೆಕ್ಕಿಗನ ಮೇಲೆ ಕೆಂಭಾವಿ ಪಿಎಸ್‍ಐ ಇದೇ ರೀತಿಯಾಗಿ ಹಲ್ಲೆ ನಡೆಸಿದ್ದರು,ತಹಸೀಲ್ದಾರರು ಕರೆ ಮಾಡಿ ಹೇಳಿದರು 1 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.ಅದೆರೀತಿಯಾಗಿ ತಹಸೀಲ್ ಕಚೇರಿಯ ಸಿಪಾಯಿ ರವಿಕುಮಾರ ಎಂಬುವವರ ಮೇಲೆ ಕುಂಬಾರಪೇಟೆಯಲ್ಲಿ ಪೊಲೀಸರು ಹಲ್ಲೆಗೆ ಮುಂದಾಗಿ ಬೂಟುಗಾಲಿನಲ್ಲಿ ಒದೆಯಲು ಹೋಗಿದ್ದಾರೆ.ಇವುಗಳನ್ನೆಲ್ಲ ಸಹಿಸಿಕೊಳ್ಳುವು ಸಾಧ್ಯವಿಲ್ಲ,ಆದ್ದರಿಂದ ಈ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಕೋವಿಡ್-19 ಕರ್ತವ್ಯದಿಂದ ನಮ್ಮನ್ನು ಕೈಬಿಟ್ಟು ಪೊಲೀಸರನ್ನೆ ನೇಮಿಸಿಕೊಳ್ಳುವಂತೆ ವಿನಂತಿಸುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ತಹಸೀಲ್ದಾರ ನಿಂಗಣ್ಣ ಬಿರಾದಾರ್ ಅವರ ಮೂಲಕ ಮನವಿ ಸಲ್ಲಿಸಿ ಹಲ್ಲೆ ಮಾಡಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವವರೆಗೆ ಕರ್ತವ್ಯಕ್ಕೆ ಬರುವುದಿಲ್ಲವೆಂದು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಸಂಘದ ಅಧ್ಯಕ್ಷ ಸೋಮನಾಥ ನಾಯಕ,ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷ ಪ್ರದೀಪ ಸೇರಿದಂತೆ ಅನೇಕ ಜನ ಗ್ರಾಮ ಲೆಕ್ಕಿಗರಿದ್ದರು.