ಸುರಪುರ: ಸೋಮವಾರ ರಾತ್ರಿ ಅಕಾಲಿಕವಾಗಿ ಸುರಿದ ಮಳೆ ಮತ್ತು ಗಾಳಿಗೆ ತಾಲೂಕಿನ ಖಾನಾಪುರ ಎಸ್.ಹೆಚ್ ಬಳಿಯ ರತ್ನಾಕರ ಭಟ್ ಅವರ ಜಮೀನಲ್ಲಿ ನಿರ್ಮಿಸಲಾಗಿರುವ ಭಾರತೀತೀರ್ಥ ಗೋ ಸಂರಕ್ಷಣಾ ಕೇಂದ್ರದ ತಗಡುಗಳು ಹಾರಿ ಹೋಗಿ ಅಪಾರ ಪ್ರಮಾಣದ ನಷ್ಟವುಂಟಾಗಿದೆ.
ಕೇಂದ್ರದ ತಗಡುಗಳು ಹಾರಿ ಹೋಗಿದ್ದರಿಂದ ಕೇಂದ್ರದಲ್ಲಿ ಶೇಖರಿಸಿಡಲಾಗಿದ್ದ ಮೇವು ಹಾಗು ಜಾನುವಾರುಗಳಿಗೆ ಮೇಯಿಸಲು ಇಟ್ಟಿದ್ದ ದವಸಗಳು ಕೂಡ ಹಾಳಾಗಿವೆ.ಅಲ್ಲದೆ ಕೇಂದ್ರದ ಪಕ್ಕದಲ್ಲಿ ನಿರ್ಮಿಸಲಾಗಿದ್ದ ಸೆಡ್‍ಕೂಡ ಗಾಳಿಗೆ ನೆಲಕ್ಕುರಳಿವೆ.ಅಲ್ಲದೆ ಜಮೀನಿನಲ್ಲಿ ಬೆಳೆಯಲಾಗಿದ್ದ ಕರಿಬೇವು ಮತ್ತು ಮೆಣಸಿನ ಗಿಡಗಳು ಗಾಳಿಗೆ ನೆಲಕಚ್ಚಿ ನಷ್ಟವುಂಟಾಗಿದೆ.
ರುಕ್ಮಾಪುರ ಗ್ರಾಮದಲ್ಲಿಯೂ ಹತ್ತಕ್ಕು ಹೆಚ್ಚು ಮನೆಗಳ ತಗಡುಗಳು ಹಾರಿ ಹೋಗಿ ಬಡ ಜನತೆಗೆ ಚಿಂತೆಗೀಡು ಮಾಡಿದೆ.ಮನೆಗಳಿಲ್ಲದ ಜನರು ತಾಲೂಕು ಆಡಳಿತದಿಂದ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲವೆಂದು ತಮ್ಮ ಬೇಸರ ಹೊರ ಹಾಕಿದ್ದಾರೆ.ಅಲ್ಲದೆ ನಮಗೆ ಮನೆಗಳನ್ನು ನಿರ್ಮಿಸಿ ಕೊಡಬೇಕೆಂದು ಮನವಿ ಮಾಡಿದ್ದಾರೆ.