ಬಂಡವಾಳಶಾಹಿಗಳ ಪರ ನಿಂತ ಕೇಂದ್ರ ಸರ್ಕಾರ : ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತ ವಿರೋಧಿ: ರಂಜೋಳವಿ

0
94

ಕಲಬುರಗಿ : ಈ ದೇಶದ ಬೆನ್ನೆಲುಬು ಅನ್ನದಾತ, ಕೇಂದ್ರದಲ್ಲಿ ಆಡಳಿತ ನಡೆಸುವ ಬಿಜೆಪಿ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ವಿಫಲವಾಗುತ್ತಿದೆ. ಅನ್ನದಾತರಿಗೆ ಅನ್ಯಾಯವಾಗುವಂತ ಕಾಯ್ದೆಯನ್ನ ಜಾರಿಗೆ ತರಲು ಮುಂದಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಜಿಲಾ ಕೋಆರಢಿನೆಟರ ಮೈನಾರಿಟಿ ಸಾಜಿದ ಆಲಿ ರಂಜೋಳವಿ ತಿಳಿಸಿದರು.

ಸದ್ಯದ ಎಪಿಎಂಸಿ ನೀತಿ ಬದಲಾವಣೆ ಮಾಡಿದರೆ ವರ್ತಕರು ಮತ್ತು ರೈತರ ಸಂಬಂಧ ಕೊಂಡಿ ಕಳಚಿದಂತಾಗುತ್ತದೆ. ರೈತರು ತಾವು ಬೆಳೆದ ಬೆಳೆಗಳನ್ನ ವರ್ತಕರಿಗೆ ಮಾರಾಟ ಮಾಡಿ ವ್ಯವಹಾರ ಮಾಡುತ್ತಿದ್ದರು. ಇದರಿಂದ ರೈತರು ನೇರವಾಗಿ ವರ್ತಕರ ಸಂಪರ್ಕದಿಂದ ಬೆಳೆ ಮಾರಾಟವಾಗುತ್ತಿತ್ತು. ಇದರಿಂದ ರೈತರಿಗೆ ಸ್ಥಳೀಯ ವರ್ತಕರ ನೇರ ಸಂಪರ್ಕ ಹೊಂದುದುತ್ತಿದ್ದರು ಎಪಿಎಂಸಿ ಕಾಯ್ದೆ ಬದಲಾವಣೆ ಮಾಡಿದರೆ ರೈತರು ಮತ್ತು ವರ್ತಕರ ನಡುವೆ ಸಂಬಂಧ ಕಳಚುತ್ತದೆ. ರೈತರು ತಮ್ಮ ಬೆಳೆ ಬಗ್ಗೆ ನೇರವಾಗಿ ಯಾರುನ್ನೂ ಕೇಳದಂತ ಪರಿಸ್ಥಿತಿ ಉಂಟಾಗುತ್ತದೆ.

Contact Your\'s Advertisement; 9902492681

ವಿಶ್ವದ ಯಾವುದೇ ಕಂಪನಿ ನೇರವಾಗಿ ರೈತನಿಂದ ಉತ್ಪನ್ನ ಖರೀದಿ ಮಾಡಬಹುದೆಂದು ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲು ಮುಂದಾಗಿದೆ. ಇದರಿಂದ ಮೊದಲು ರೈತರಿಗೆ ಸ್ವಲ್ಪ ಹಣ ಹೆಚ್ಚಿನದಾಗಿ ಸಿಗಬಹುದು. ಮುಂದಿನ ದಿನಗಳಲ್ಲಿ ರೈತರಿಗೆ ಅನ್ಯಾಯವಾದರೆ ನೇರವಾಗಿ ಕಂಪನಿ ಸಂಪರ್ಕಕ್ಕೆ ಸಿಗುತ್ತಾರಾ ಎಂಬ ಪ್ರಶ್ನೆ ಉಂಟಾಗುತ್ತಿದೆ. ದೊಡ್ಡ ದೊಡ್ಡ ಕಂಪನಿಗಳು ರೈತರಿಗೆ ಯಾವುದೇ ಷರತ್ತು ಇಲ್ಲದೆ ಉತ್ಪನ್ನ ಖರೀದಿಸಲು ಸಾಧ್ಯವಿಲ್ಲ. ಕಂಪನಿಗಳಿಗೆ ಗುಣಮಟ್ಟದ ಉತ್ಪನ್ನಗಳನ್ನ ಮಾತ್ರ ಮಾರಾಟ ಮಾಡಬೇಕಾಗುತ್ತದೆ, ರೈತರು ಬೆಳೆದ ಎಲ್ಲಾ ಉತ್ಪನ್ನಗಳನ್ನ ಕಂಪನಿಗಳೇ ನೇರವಾಗಿ ಖರೀದಿಸಲು ಸಾಧ್ಯವಿಲ್ಲ ಇಂಥ ಗೊಂದಲಗಳ ನಡುವೆ ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ತರಲು ಮುಂದಾಗಿರುವುದು ಸರಿಯಲ್ಲ.

ಇಂಥ ಅವೈಜ್ಞಾನಿಕ ನೀತಿಗಳಿಂದ ರೈತರಿಗೆ ಯಾವುದೇ ಅನುಕೂಲವಾಗುವುದಿಲ್ಲ, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಿ, ಸರ್ಕಾರವೇ ನೇರವಾಗಿ ಖರೀದಿಸಿ. ಕಂಪನಿಗಳಿಗೆ ಕೆಂಪು ಹಾಸಿಗೆ ಹಾಕುವ ಬದಲು ಇರುವಂತ ಎಪಿಎಂಸಿ ಯನ್ನ ಅಭಿವೃದ್ಧಿ ಮಾಡಿ ರೈತರಿಗೆ ಅನುಕೂಲವಾಗುವಂತೆ ಮಾಡಬೇಕು. ತರಕಾರಿ, ಹಣ್ಣು ಮತ್ತು ಹೂ ಬೆಳೆಗಳನ್ನ ಸಂರಕ್ಷಣೆ ಮತ್ತು ಸರಬರಾಜು ಮಾಡಲು ಪ್ರತಿಯೊಂದು ಎಪಿಎಂಸಿಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಿ, ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನ ಕೈ ಬಿಡಲಿ ಎಂದು ಜಿಲ್ಲಾ ಕಾಂಗ್ರೆಸ್ ಮೈನಾರಿಟಿ ಕೋಆರಡಿನೇಟರ ಸಾಜಿದ ಆಲಿ ರಂಜೋಳವಿ ಒತ್ತಾಯ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here