ಕಲಬುರಗಿ: ಇಂದು ಒಟ್ಟು ಎಂಟು ಜನರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದ್ದು, ಬೆಳಿಗ್ಗೆ ಮೃತ ವ್ಯಕ್ತಿ ಸೇರಿ ಇಬ್ಬರಿಗೆ ಸೋಂಕು ತಗಲಿದ್ದು ದೃಢ ಪಟ್ಟಿದ ಬೆನ್ನಲ್ಲೇ, ಇಂದು ಮತ್ತೆ ಸಂಜೆ ಆರೋಗ್ಯ ಇಲಾಖೆಯ ಕೋವಿಡ್-19 ಪರೀಕ್ಷೆಯಲ್ಲಿ ಆರು ಜನರಿಗೆ ಕೊರೊನಾ ಪಾಸಿಟಿವ್ ಆಗಿದೆ.
ಆಂದ್ರಪ್ರದೇಶದ ಪ್ರಯಾಣದ ಹಿನ್ನೆಲೆಯಲ್ಲಿ ಓರ್ವ ವ್ಯಕ್ತಿ ಸೇರಿ ರೋಗಿ ಸಂಖ್ಯೆ ಪಿ- 806 ಸಂಪರ್ಕದಿಂದ 5 ಜನರಿಗೆ ಕೊರೊನಾ ತಗುಲಿದೆ.
ಜಿಲ್ಲೆಯಲ್ಲಿ ಸೋಂಕು ಪೀಡಿತರ ಸಂಖ್ಯೆ 81ಕ್ಕೆ ಏರಿಕೆಯಾಗಿದೆ.