ಕಲಬುರಗಿ: ಚಿಂಚೋಳಿ ತಾಲೂಕಿನ ಮಿರಿಯಾಣ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಮಹಿಳೆಗೆ ಹಾವು ಕಚ್ಚಿ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮಿರಿಯಾಣ ಗ್ರಾಮದ ನಿವಾಸಿಯಾದ ಅನಂತಮ ಲಕ್ಷ್ಮಪ್ಪ (32) ಮೃತಪಟ್ಟ ಮಹಿಳೆ. ಗಣಿ ಹಾಗೂ ಸ್ವಂತ ಜಮೀನಿನಲ್ಲಿ ಕೆಲಸ ಮಾಡುತ್ತಿದ ಇವರು, ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸ ಇಲ್ಲದೇ ನರೇಗಾ ಯೋಜನೆಯಲ್ಲಿ ಜಮೀನು ಒಂದರಲ್ಲಿ ಕೆಲಸ ಮಾಡುವ ವೇಳೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿಗ ಹಾವು ಕಚ್ಚಿದೆ ಎಂದು ತಿಳಿದುಬಂದಿದ್ದ ತಕ್ಷಣವೇ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಔಷಧಿಯ ಕೊರತೆಯಿಂದ ನೆರೆ ರಾಜ್ಯದ ಹೈದರಾಬಾದ್ ಗೆ ಚಿಕಿತ್ಸೆಗಾಗಿ ಒಯಲಾಗಿದೆ. ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ
ಸಾವನ್ನಪ್ಪಿದಾರೆ.
ಕಾರ್ಮಿಕ ಮಹಿಳೆ ನರೇಗಾ ಕೆಲಸ ಮಾಡುವ ವೇಳೆ ಮೃತಪಟ್ಟಿದ್ದರಿಂದ ಯೋಜನೆ ಅಡಿಯಲ್ಲಿ ಪರಿಹಾರ ಘೋಷಣೆ ಮಾಡಬೇಕು ಮತ್ತು ಕ್ಷೇತ್ರದ ಶಾಸಕ ಮಧ್ಯೆ ಪ್ರವೇಶಿ ಮೃತ ಕುಟುಂಬಕ್ಕೆ ಸೂಕ್ತ ಪರಿಹಾರವ ಘೋಷಿಸಬೇಕೆಂದು ಸಿಪಿಎಂ ಮುಖಂಡ ಜಾಫರ್ ಖಾನಸಾಬ್ ಸಾಬ್, ಕಾರ್ಯದರ್ಶಿ ಶರಬಸಪ್ಪ ಮಮಶೇಟ್ಟಿ ಆಗ್ರಹಿಸಿದ್ದಾರೆ.