ವಿಶ್ವಗುರು ಬಸವಣ್ಣನವರು ನಮ್ಮ ದೇಶ ಕಂಡ ಅಪರೂಪದ ಜಗಜ್ಯೋತಿ. ಅವರ ತತ್ವಾದರ್ಶಗಳನ್ನು ಇಂದು ನಮ್ಮ ನಾಡು, ಜನಾಂಗ, ದೇಶ-ಭಾಗ ಎಲ್ಲಾ ಸೀಮೆಗಳನ್ನು ದಾಟಿ ವಿಶ್ವತೋಮುಖವಾಗಿ ಹರಡುತ್ತಿವೆ. ಅವರ ಸಮಗ್ರ ಕ್ರಾಂತಿಗೆ ವಿಶ್ವವೇ ತಲೆಬಾಗುತ್ತಿದೆ.
ಈ ವಿಜ್ಞಾನಯುಗದಲ್ಲಿಯೂ ಅವರು ಆಚರಿಸಿದ ತತ್ವಗಳನ್ನು ಇಂದು ನಮಗೆ ಆಚರಿಸಲು ಸಾಧ್ಯವಾಗುತ್ತಿಲ್ಲ. ಬಸವಣ್ಣನವರು ಅಷ್ಟೊಂದು ಆಧುನಿಕರು. ಅವರ ಜಗದಗಲ ಮುಗಿಲಗಲವಾಗಿರುವ ಘನ ವ್ಯಕ್ತಿತ್ವವನ್ನು ಅರಿಯದೆ ಡಾ. ಸಂಗಮೇಶ ಸವದತ್ತಿಮಠರವರು ಬಸವಣ್ಣನವರಿಗೆ ಎತ್ತು ಎಂದು ಪ್ರಚುರ ಪಡಿಸಲು ಹೊರಟಿರುವುದು ಅವರ ಅರೆ ಜಾಣತನದ ಪರಮಾವಧಿ ಎಂದೇ ಹೇಳಬೇಕು.
ಸುಮಾರು 800 ಶತಮಾನಗಳಿಂದ ಬಸವಸೂರ್ಯಕ್ಕೆ ಗ್ರಾಸಿಸಲು ಅನೇಕ ಜಾತಿವಾದಿಗಳು ಪ್ರಯತ್ನ ಪಡುತ್ತಿವೆ. ಆದರೆ ಅವರು ತಮ್ಮನ್ನು ತಾವೇ ಸುಟ್ಟುಕೊಂಡಿದ್ದಾರೆ. ಬಸವಣ್ಣನವರು ದಿನದಿನಕ್ಕೆ ಪ್ರಖರ ಸೂರ್ಯನಾಗಿ ಜಗತ್ತನ್ನೇ ಬೆಳೆಗಿಸುತ್ತಿದ್ದಾರೆ. ಬಸವಣ್ಣನವರು ಪುರಾಣ ಪುರುಷರಲ್ಲ. ಅವರು ವಿಶ್ವಮಾನವರು, ಆದರೆ ಶಾಮನೂರು ಶಿವಶಂಕರಪ್ಪನವರ ಕೃತ್ಯ ಹಾಗೂ ರಂಭಾಪುರಿ ಶ್ರೀಗಳ ಹೇಳಿಕೆಯನ್ನು ಎತ್ತಿಹಿಡಿಯುವ ದುರುದ್ದೇಶದಿಂದ ಸವದತ್ತಿಮಠರವರು ತಾವೇ ಬಲಿಪಶುವಾಗಿದ್ದಾರೆ. ಅವರು ಬಸವಣ್ಣನವರ ಕುರಿತು ತಾಳಿದ ವಿಕೃತ ಮನಸ್ಸನ್ನು ಬಹಿರಂಗಗೊಳಿಸಿದ್ದಾರೆ.
ಅವರ ಈ ಮನಸ್ಥಿತಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇನ್ನು ಮುಂದಾದರು ಇಂತಹ ಬಸವತತ್ವ ವಿರೋಧಿ ನಿಲುವುಗಳನ್ನು ತಾಳಬಾರದು. ಇಲ್ಲದಿದ್ದರೆ ತಮಗೆ ಈ ಸಮಾಜ ಎಂದೆಂದಿಗೂ ಕ್ಷಮಿಸುವುದಿಲ್ಲ. ಎಂಬುದು ಎಚ್ಚರಿಕೆ ಇರಲಿ.
ಪರಮಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದೇವರು ಅಧ್ಯಕ್ಷರು, ಹಿರೇಮಠ ಸಂಸ್ಥಾನ ಭಾಲ್ಕಿ. ಅನುಭವಮಂಟಪ, ಬಸವಕಲ್ಯಾಣ.