ಕನ್ನಡ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡಲು ಕರ್ನಾಟಕ ನವ ನಿರ್ಮಾಣ ಸೇನೆ ಮನವಿ

0
79

ಸೇಡಂ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸಮಸ್ಯೆಯಿಂದ ಕನ್ನಡ ಚಟುವಟಿಕೆಗಳನ್ನು ನಿಲ್ಲಿಸುವ ಹಂತಕ್ಕೆ ಬಂದಿದ್ದು. ಹೀಗಾಗಿ ಸರಕಾರದ ಆಸ್ತಿಗಳನ್ನು ಒತ್ತೇ ಇಟ್ಟಾದರು ಕನ್ನಡ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡಬೇಕು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ತಾಲ್ಲೂಕು ಅದ್ಯಕ್ಷ ಭೀಮಶಂಕರ ಕೋರವಿ ಅವರು ತಹಶಿಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಸರ್ಕಾರ ನೀಡುವ ಅಲ್ಪ ಹಣದಲ್ಲಿ ವಾರ್ಷಿಕ ಚಟುವಟಿಕೆಗಳನ್ನು ನಡೆಸಿಕೊಂಡು ಗಡಿ,ನಾಡು ಒಳನಾಡಿನಲ್ಲಿ ಕನ್ನಡ ಚಟುವಟಿಕೆಗಳನ್ನು ಪ್ರೋತ್ಸಾಹ ನೀಡುವ ಕೇಲಸ ಪ್ರಾಧಿಕಾರ ಈ ಹಿಂದಿನಿಂದಲೂ ಮಾಡುತ್ತಲಿದೆ.ಕರೋನಾ ಸಂಕಷ್ಟ ನೆಪದಲ್ಲಿ ಪ್ರಾಧಿಕಾರಕ್ಕೆ ಅನುದಾನ ನೀಡುವಲ್ಲಿ ಯಾವುದೇ ಕಾರಣ ನೀಡದೆ ಐದು ಕೋಟಿ ಹಣವನ್ನು ತಕ್ಷಣವೆ  ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ  ಒತ್ತಾಯಿಸಿದ್ದೆವೆ ಎಂದು ಇ ಮೀಡಿಯಾ ಲೈನ್ ಜೊತೆ ಹಂಚಿಕೊಂಡರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ತಾಲ್ಲೂಕು ಉಪ ಅದ್ಯಕ್ಷ ಜಯ ಪ್ರಕಾಶ ಪಾಟೀಲ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಜಗನಾಥ ಇಂದ್ರಕಾರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here