ತುಟ್ಟಿ ಭತ್ಯೆ ನಮೋಶಿ ಮಾತಿಗೆ ಮನ್ನಣೆ ಬೇಡ: ಡಾ. ಆರ್ ಸಿ ಕಾಂತಾ

0
89

ಕಲಬುರಗಿ: ಮೂರು ಅವಧಿಗೆ ಎಂ.ಎಲ್.ಸಿ.ಯಾಗಿ, ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಭಾರತೀಯ ಜನತಾ ಪಕ್ಷದ ಸಹ ವಕ್ತಾರರಾಗಿ; ಅಷ್ಟೇ ಅಲ್ಲದೆ ಮುಂಬರುವ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿಯಾಗಿರುವ ಶಶೀಲ್ ನಮೋಶಿ ಅವರು ತಮ್ಮ ಸ್ವಂತ ರಾಜಕೀಯ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು `ಸರಕಾರಿ ನೌಕರರ ತುಟ್ಟಿಭತ್ಯೆಯನ್ನು ಕಡಿತ ಮಾಡಬೇಡಿರಿ’ ಎಂದು ಪತ್ರ ಬರೆದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿರುವುದು ನಿಜಕ್ಕೂ ನಾಜಕೆಗೇಡಿನ ಸಂಗತಿ ಎಂದು ಭಾಜಪಾ ಸದಸ್ಯ ನಿವೃತ್ತ ಪ್ರಾಧ್ಯಾಪಕ ಡಾ. ರೇವಪ್ಪ ಕಾಂತಾ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ, ಭಾಜಪದ ನಿಷ್ಠಾವಂತ ಕಾರ್ಯಕರ್ತರಾಗಿ ನಾವೆಲ್ಲ `ಆರೋಗ್ಯ ಸೇತು’ ಮತ್ತು `ಆರೋಗ್ಯ ಮಿತ್ರ’ ಆ್ಯಪ್‍ಗಳನ್ನು ವ್ಯಾಪಕವಾಗಿ ಪರಿಚಯಿಸುವ ಕಾರ್ಯದಲ್ಲಿ, ಮುಖಗವುಸುಗಳನ್ನು ಸಿದ್ಧಪಡಿಸಿ, ಉಚಿತವಾಗಿ ವಿತರಿಸುವಲ್ಲಿ, ಹಸಿದ ಹೊಟ್ಟೆಗಳಿಗೆ ಅನ್ನ-ನೀರು ಒದಗಿಸುವಲ್ಲಿ, ಕೊರೋನಾ ಸೋಂಕನ್ನು ತಡೆಗಟ್ಟಲು ಕೈಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಅರಿವು ಮೂಡಿಸುವ ಅಭಿಯಾನದಲ್ಲಿ ತೊಡಗಿರುವಾಗ, ಈ ಮಹನೀಯರು ಇಂತ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವುದು ಖಂಡನೀಯ.

Contact Your\'s Advertisement; 9902492681

ಆದುದರಿಂದ ಪಕ್ಷದ ಅಧ್ಯಕ್ಷರು `ಇದು ಅವರ ವೈಯಕ್ತಿಕ ಅಭಿಪ್ರಾಯ ಎಂದು ತಳ್ಳಿ ಹಾಕದೇ, ಶಿಸ್ತಿನ ಕ್ರಮ ಜರುಗಿಸಬೇಕು ಮುಖ್ಯಮಂತ್ರಿಗಳಿಗೆ ಹಾಗೂ ಪಕ್ಷದ ಅಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಮೂರು ತುಟ್ಟಿಭತ್ಯೆಗಳ ಸ್ಥಗಿತದಂತಹ ದಿಟ್ಟ ಹಾಗೂ ಸೂಕ್ಷ್ಮ ನಿರ್ಧಾರವನ್ನು ಕೈ ಬಿಡಬೇಕು ಅಥವಾ ಮರು ಪರಿಶೀಲಿಸಬೇಕೆಂಬ ಮನವಿಗೆ ಆರು ಲಕ್ಷ ಸರಕಾರಿ ನೌಕರರ ಪೈಕಿ ಕೆಲವರ ಮನದಲ್ಲಿಯಾದರೂ ತಿಳಿದೋ, ತಿಳಿಯದೋ ರಾಜ್ಯ ಸರಕಾರದ ವಿರುದ್ಧ ಅಸಹನೀಯ ಭಾವನೆ ಹುಟ್ಟು ಹಾಕಬಹುದೆಂಬ ಸಾಮಾನ್ಯ ಪರಿಜ್ಞಾನವಿಲ್ಲದ ಶಶೀಲ್ ನಮೋಶಿಯವರನ್ನು ತಾವು ಹಾಗೂ ಭಾಜಪದ ಪ್ರಾದೇಶಿಕ ಅಧ್ಯಕ್ಷರು ಹದ್ದುಬಸ್ತಿನಲ್ಲಿಡಬೇಕು. ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ನಮೋಶಿ ವಿರುದ್ಧ, ಪಕ್ಷದ ಅಧ್ಯಕ್ಷ ಶ್ರೀ ನಳಿನಕುಮಾರ್ ಕಟೀಲು ಅವರು ಶಿಸ್ತಿನ ಕ್ರಮಗಳನ್ನು ಜರುಗಿಸಬೇಕೆಂದು ಉಭಯ ನಾಯಕರಲ್ಲಿ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here