ಕಲಬುರಗಿ: ಬಟ್ಟೆ ಮತ್ತು ರೆಡಿಮೇಡ್ ವ್ಯಾಪಾರ ಕಳೆದ ಎರಡು ತಿಂಗಳಿಂದ ಕೋವಿಡ್ ೧೯ ಬಿಕ್ಕಟ್ಟಿನಿಂದಾಗಿ ಸ್ಥಗಿತಗೊಂಡಿದೆ. ಎಲ್ಲಾ ಬಟ್ಟೆ ವ್ಯಾಪಾರಿಗಳು ಹಾಗೂ ಉದ್ಯಮಿಗಳು ಸ್ಥಗಿತಗೊಳಿಸುವಿಕೆಯನ್ನು ಬೆಂಬಲಿಸುತ್ತೇವೆ ಎಂದು ಬಟ್ಟೆ ಮತ್ತು ರೆಡಿಮೇಡ್ ಅಸೋಸಿಯೇಷನ್ ಕಾರ್ಯದರ್ಶಿ ಆನಂದ ದಂಡೋತಿ ಅವರು ತಿಳಿಸಿದ್ದಾರೆ.
ಎಲ್ಲಾ ಕಾರ್ಮಿಕ ವೇತನವನ್ನು ಪಾವತಿಸಲು ಆಡಳಿತ ಹೇಳುತ್ತದೆ.ಆದರೆ ವ್ಯವಹಾರವನ್ನು ಸ್ಥಗಿತಗೋಳಿಸಿ ವೇತನವನ್ನು ಪಾವತಿಸುವುದು ಕಷ್ಟವಾಗುತ್ತಿದೆ. ಗರಿಷ್ಠ ವ್ಯಾಪಾರಸ್ಥರು ತಮ್ಮ ವ್ಯವಹಾರಕ್ಕಾಗಿ ಸಾಲವನ್ನು ತೆಗೆದುಕೊಂಡಿರುತ್ತಾರೆ. ಸಾಲವನ್ನು ಹೇಗೆ ಮರುಪಾವತಿಸುವುದು ಎಂಬ ಪ್ರಶ್ನೆಯನ್ನು ಈಗ ಅವರಲ್ಲಿ ಕಾಡುತ್ತಿದೆ.
ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಬಟ್ಟೆ ಮತ್ತು ರೆಡಿಮೇಡ್ ವ್ಯಾಪಾರವು ಬಲು ಜೋರಾಗಿಯೇ ನಡೆಯುತ್ತದೆ.
ಏಪ್ರೀಲ್ ಹಾಗೂ ಮೇ ತಿಂಗಳುಗಳಲ್ಲಿ ಮದುವೆ ಸಮಾರಂಭಗಳು ಸೇರಿದಂತೆ ಇನ್ನಿತರು ಕಾರ್ಯಕ್ರಮಗಳು ನಡೆಯುವುದು ಈ ಎರಡು ತಿಂಗಳುಗಳಲ್ಲಿಯೇ ಜಾಸ್ತಿಯಾಗಿರುತ್ತದೆ. ಆದ್ದರಿಂದ ಎಲ್ಲಾ ಉದ್ಯಮಿಗಳು ಹೆಚ್ಚಿನ ಪ್ರಮಾಣದಲ್ಲಿ ಸರಕುಗಳನ್ನು ಖರೀದಿಸಿದ್ದಾರೆ. ಆದರೆ ಈ ಕೋವಿಡ್-೧೯ ಲಾಕ್ ಡೌನ್ ನಿಂದ ಎಲ್ಲಾ ಸರಕುಗಳು ಡೆಡ್ ಸ್ಟಾಕ್ ಆಗಿವೆ ಎಂದು ಎಲ್ಲಾ ಉದ್ಯಮಿಗಳು ಹಾಗೂ ವ್ಯಾಪಾರಿಗಳು ಆತಂಕದ ಸ್ಥತಿಯಲ್ಲಿದ್ದಾರೆ.
ಎಲ್ಲಾ ಸಮಸ್ಯೆಗಳಿಂದ ಚೇತರಿಸಿಕೊಳ್ಳಲು ಜಿಲ್ಲಾಡಳಿತವು ಬಟ್ಟೆ ಮತ್ತು ರೆಡಿಮೇಡ್ ಅಂಗಡಿಗಳನ್ನು ತೆರೆಯಲು ಮಾನದಂಡಗಳನ್ನು ಅನುಸರಿಸಿ ಅನುಮತಿ ನೀಡಬೇಕು ಎಂದು ದಂಡೋತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.