80 ವರ್ಷದ ವೃದ್ಧ ಸೇರಿ ಮೂವರಿಗೆ ಕೊರೋನಾ ಸೋಂಕು

0
64

ಕಲಬುರಗಿ: ಜಿಲ್ಲೆಯಲ್ಲಿ ಶುಕ್ರವಾರ 80 ವರ್ಷದ ವೃದ್ಧ ಸೇರಿ ಮೂವರಿಗೆ ಕೊರೋನಾ ಸೋಂಕು‌ ದೃಢವಾಗಿದ್ದು, ಇದರಿಂದ ಸೋಂಕಿತರ ಸಂಖ್ತೆ 86ಕ್ಕೆ ಏರಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.

ಕಲಬುರಗಿ ನಗರದ ಕಂಟೇನ್ ಮೆಂಟ್ ಝೋನ್ ಸಂಪರ್ಕದಲ್ಲಿ ಬಂದ ಹಳೇ‌ ಭೋವಿಗಲ್ಲಿ ಪ್ರದೇಶದ 30 ವರ್ಷದ ಯುವತಿ (P-1038), ILI ಹಿನ್ನೆಲೆಯ ಅಫಜಲಪೂರ ತಾಲೂಕಿನ ಅಳ್ಳಗಿ (ಬಿ) ಗ್ರಾಮದ 80 ವರ್ಷದ ವೃದ್ಧ (P-1039) ಹಾಗೂ ಮುಂಬೈ ಪ್ರವಾಸ ಹಿನ್ನೆಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ 24 ವರ್ಷದ ಯುವಕನಿಗೆ(P-1040) ಕೊರೋನಾ ಸೋಂಕು ಕಂಡುಬಂದಿದೆ.

Contact Your\'s Advertisement; 9902492681

ಜಿಲ್ಲೆಯಲ್ಲಿ ಕೊರೋನಾ‌ ಪೀಡಿತ 86 ರೋಗಿಗಳಲ್ಲಿ 7 ಜನ ನಿಧನ‌ರಾಗಿದ್ದು, 46 ರೋಗಿ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ‌. ಉಳಿದಂತೆ 33 ರೋಗಿಗಳಿಗೆ ಚಿಕಿತ್ಸೆ‌ ಮುಂದುವರೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here