ಶಹಾಪುರ: ಕೊರೋನಾ ವೈರಸ್ ಕೋವಿಡ್ – 19 ಸಮರದಲ್ಲಿ ಹಗಲಿರುಳು ಸೇವೆ ಸಲ್ಲಿಸಿದ ತಾಲ್ಲೂಕಿನ ಕಾಟಮನಹಳ್ಳಿ ಗ್ರಾಮದ ಆಶಾ ಕಾರ್ಯಕರ್ತೆ ದಾನಮ್ಮಳಿಗೆ ಶಹಾಪುರ ತಾಲ್ಲೂಕಿನ ಕಿರಾಣಾ ವ್ಯಾಪಾರಸ್ಥರಿಂದ ಐದು ಸಾವಿರ ರೂಪಾಯಿಗಳ ಧನ ಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ.
ಲಾಕ್ ಡೌನ್ ಸಂದರ್ಭದೊಳಗೆ ಹೆತ್ತ ಮಗನಿಗೆ ರಸ್ತೆ ಅಪಘಾತ ಸಂಭವಿಸಿ ಸುಮಾರು ಇಪ್ಪತ್ತು ದಿನಗಳ ಕಾಲ ಕೋಮಾದಲ್ಲಿದ್ದರು ಮಗನನ್ನು ಲೆಕ್ಕಿಸದೇ ಧೈರ್ಯದಿಂದ ಕರೋನಾ ಯುದ್ಧದ ಸೇವೆಗೆ ನಿರಂತರವಾಗಿ ಹಾಜರಾದ ಆಶಾ ಕಾರ್ಯಕರ್ತೆ ದಾನಮ್ಮಳ ಸೇವೆ ನಿಜಕ್ಕೂ ಶ್ಲಾಘನೀಯವಾದದ್ದು ಎಂದು ಬಣ್ಣಿಸಿದರು.
ಅಪಘಾತದಲ್ಲಿ ಆಸ್ಪತ್ರೆಗೆ ದಾಖಲಾದ ಮಗನ ಚಿಕಿತ್ಸೆಗಾಗಿ ಆರ್ಥಿಕ ಸಂಕಷ್ಟಕ್ಕೊಳಗಾದ ಈ ಬಡ ಕುಟುಂಬಕ್ಕೆ ತಮ್ಮ ಕೈಲಾದಷ್ಟು ವೈಯಕ್ತಿಕ ಧನ ಸಹಾಯ ನೀಡಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ.
ಈ ಸಂದರ್ಭದಲ್ಲಿ ಶಹಾಪುರ ತಾಲ್ಲೂಕ ಕಿರಾಣಾ ವ್ಯಾಪಾರಸ್ಥರ ಸಂಘದ ಯುವ ಮುಖಂಡರಾದ ರಾಜು ಆನೆಗುಂದಿ,ಶಾಂತು ತೋಟಿಗೇರ, ದೀಕ್ಷಿತ್, ಮಹಾಂತೇಶ್ ರಾಂಪುರ, ಅರವಿಂದ್ ಉಪ್ಪಿನ್, ಅಶೋಕ್, ಅರ್ಜುನ್, ಮಾದೇಶ್ ಮಂಗಲ್, ವೀರೇಶ್, ಬಸು ಹಾಗೂ ಇತರರು ಹಾಜರಿದ್ದರು.