ಬೆಂಗಳೂರು: ಕೊರೊನಾ ಎದುರಿಸುವ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದು, ರಾಜ್ಯದಲ್ಲಿಯೂ ಮುಂಜಾಗ್ರತಾ ಕ್ರಮಗಳು ಕೈಗೊಳ್ಳಲಾಗುತಿದೆ. ಈ ಹಿನ್ನೆಲೆಯಲ್ಲಿ ಮದುವೆ ಸಮಾರಂಭಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೆಲವೊಂದು ಮಾರ್ಗ ಸೂಚಿ ಜಾರಿ ಮಾಡಿದೆ.
ಆರೋಗ್ಯ ಇಲಾಖೆಯ ಮಾರ್ಗಸೂಚಿ ಇಲ್ಲವೇ
- ಸಭೆ ಸಮಾರಂಭ ನಡೆಸಲು ಸ್ಥಳೀಯ ಮಟ್ಟದ ಅಧಿಕಾರಿಗಳ ಅನುಮತಿ ಕಡ್ಡಾಯ.
- ಸಭೆ, ಸಮಾರಂಭಗಳಿಗೆ ಕಂಟೋನ್ಮೆಂಟ್ ಜೋನ್ ಪ್ರದೇಶದ ವ್ಯಕ್ತಿಗಳಿಗೆ ಪ್ರವೇಶ ನಿಷೇಧ.
- 60 ವರ್ಷದ ಮೇಲ್ಪಟ್ಟ ಹಾಗೂ 10 ವರ್ಷದ ಒಳಗಿನ ಮಕ್ಕಳು ಸೇರಿದಂತೆ ಬಾಣಂತಿ ಮಹಿಳೆಯರಿಗೆ ಕಾರ್ಯಕ್ರಮಗಳಿಗೆ ನಿಷೇಧ.
- ಸಭೆ, ಸಮಾರಂಭ ನಡೆಯುವ ಪ್ರದೇಶದ ಬಾಗಿಲಿನಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು.
- ಸ್ಥಳದಲ್ಲಿ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು.
- ಕಾರ್ಯಕ್ರಮಕ್ಕೆ ಬಂದ ಜನರಿಗೆ ಜ್ವರ, ಕೆಮ್ಮು, ಕಫಾ ಕಂಡು ಬಂದಲ್ಲಿ ಕೂಡಲೇ ಮೆಡಿಕಲ್ ಚೆಕಪ್ ಮಾಡಿಸಬೇಕು.
- ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯ.
- ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು 1 ಮೀಟರ್ ನಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
- ಕೊಠಡಿಗಳಲ್ಲಿ ಹ್ಯಾಂಡ್ ವಾಶ್, ಸೋಪ್, ನೀರು ಹಾಗೂ ವಾಶ್ ರೂಮ್ ವ್ಯವಸ್ಥೆ ಇರಬೇಕು.
- ಸಮಾರಂಭ ನಡೆಯುವ ಸ್ಥಳದಲ್ಲಿ ಮದ್ಯಪಾನ, ಗುಟ್ಕಾ, ಸಿಗರೆಟ್ ನಿಷೇಧ.
- ಕಾರ್ಯಕ್ರಮ ನಡೆಯುವ ಸ್ಥಳವನ್ನು ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳಬೇಕು.
- ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಿಕೆ ನಿಷೇಧ.
- ಅನುಮತಿ ಪಡೆದಿರುವ ಸ್ಥಳವನ್ನು ನೋಡಲ್ ಅಧಿಕಾರಿ ಪರಿಶೀಲನೆ ನಡೆಸಲಿದ್ದಾರೆ.
- ಮದುವೆ ಸಮಾರಂಭಕ್ಕೆ ಬರುವ ಜನರ ವೈಯಕ್ತಿಕ ವಿಳಾಸ ಪಡೆಯುವುದು ಕಡ್ಡಾಯ.
- ಉತ್ತಮ ವಾತಾವರಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಬೇಕು.
- ಹವಾನಿಯಂತ್ರಿತ ನಿಷೇಧ.
- ಕಾರ್ಯಕ್ರಮಕ್ಕೆ ಹಾಜರಾಗುವ ಪ್ರತಿಯೊಬ್ಬ ಅತಿಥಿಯೂ ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಿಕೊಂಡಿರಬೇಕು.