158 ಜನರ ಗಂಟಲ ದ್ರವ ಪರೀಕ್ಷೆಗೆ:ನಗರದ ಜನರಲ್ಲಿ ಹೆಚ್ಚಿದ ಆತಂಕ

0
59

ಸುರಪುರ: ದೇಶಾದ್ಯಂತ ಕೊರೊನಾ ವೈರಸ್ ತನ್ನ ಅಟ್ಟಹಾಸ ಮೆರೆಯುತ್ತಿರುವ ಸಂದರ್ಭದಲ್ಲಿ ಸುರಪುರ ನಗರದಲ್ಲಿಯ ಆಸರ ಮೊಹಲ್ಲಾ ಕುಟುಂಬವೊಂದರ ದಂಪತಿಗಳಲ್ಲಿ ಸೊಂಕು ಕಾಣಿಸಿಕೊಂಡಿದ್ದರಿಂದ ಜನತೆಯಲ್ಲಿ ಭಯ ಮೂಡಿತ್ತು.ಈಗ ನಗರದ ಕ್ವಾರಂಟೈನ್‍ಲ್ಲಿರುವವರಲ್ಲಿನ ಸೊಂಕು ಪರೀಕ್ಷೆ ಕಾರ್ಯಾಚರಣೆ ನಡೆಸಲಾಗಿದ್ದು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚುತ್ತಿದೆ.

ನಗರದ ಪಾಲಿಟೆಕ್ನಿಕ್ ಕಾಲೇಜು,ವಿದ್ಯಾರ್ಥಿಗಳ ವಸತಿ ನಿಲಯಗಳು ಸೇರಿದಂತೆ ಎಂಟು ಕ್ವಾರಂಟೈನಲ್ಲಿ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಗುಳೆ ಹೋಗಿ ಬಂದ ಒಟ್ಟು 600 ಕ್ಕೂ ಹೆಚ್ಚು ಕಾರ್ಮಿಕರನ್ನು ಇರಿಸಲಾಗಿದ್ದು,ಇವರಲ್ಲಿನ ಕೊರೊನಾ ಸೊಂಕು ಪರೀಕ್ಷೆ ನಡೆಸಲಾಗುತ್ತಿದೆ.

Contact Your\'s Advertisement; 9902492681

ಈ ಕುರಿತು ಸೊಂಕು ಪರೀಕ್ಷಾ ತಂಡದ ನೇತೃತ್ವ ವಹಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ.ನಾಯಕ ವಿವರಣೆ ನೀಡಿ,ಸರಕಾರದ ಮಾರ್ಗದರ್ಶನದಂತೆ ಕ್ವಾರಂಟೈನಲ್ಲಿರುವವರಲ್ಲಿನ 10 ವರ್ಷದ ಕೆಳಗಿನ ಮಕ್ಕಳು,80 ವರ್ಷ ಮೇಲ್ಪಟ್ಟ ವ್ಯಕ್ತಿಗಳು,ಗರ್ಭೀಣಿ ಮಹಿಳೆಯರು ಮತ್ತು ಕ್ಯಾನ್ಸ್‍ರ್‍ನಂತಹ ಮಾರಕ ಕಾಯಿಲೆ ಇರುವವರ ಒಟ್ಟು 158 ಜನರ ಗಂಟಲು ದ್ರವವನ್ನು ಸಂಗ್ರಹಿಸಲಾಗಿದ್ದು ಕೊರೊನಾ ಸೊಂಕು ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈಗಾಗಲೆ ಇಬ್ಬರಲ್ಲಿ ಸೊಂಕು ಕಂಡು ಬಂದಿದ್ದರಿಂದ ಭಯಗೊಂಡ ಜನರಲ್ಲಿ ಈಗ 158 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದರಿಂದ ಇವರಲ್ಲಿ ಯಾರಿಗಾದರು ಸೊಂಕು ಕಂಡು ಬಂದರೆ ನಗರದ ಜನರ ಗತಿ ಏನು ಎಂದು ಜನರಲ್ಲಿ ಪುಕ ಪುಕ ಶುರುವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here