ಸುರಪುರ: ನಗರದಲ್ಲಿರುವ ದಿಗ್ಬಂಧನ ಕೇಂದ್ರದಲ್ಲಿರುವ ಗುಳೆ ಹೋಗಿ ಬಂದಿರುವ ಕಾರ್ಮಿಕರಿಗೆ ಕನಿಷ್ಟ ಸೌಲಭ್ಯಗಳನ್ನು ನೀಡದೆ ವಂಚಿಸಲಾಗುತ್ತಿದೆ.ಜಿಲ್ಲಾ ಮತ್ತು ತಾಲೂಕು ಆಡಳಿತ ಕ್ವಾರಂಟೈನ್ ಸೆಂಟರ್‍ಗಳಲ್ಲಿರುವವರಿಗೆ ಅಗತ್ಯ ಸೌಲಭ್ಯಗಳಾದ ಅನ್ನ ನೀರು ಹಾಲು ನೀಡುವಂತೆ ಲೋಕ ಜನಶಕ್ತಿ ಪಕ್ಷದ ಜಿಲ್ಲಾಧ್ಯಕ್ಷ ಅಪ್ಪಾರಾವ್ ನಾಯಕ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ದಿಗ್ಬಂಧನ ಕೇಂದ್ರದಲ್ಲಿ ಇರಿಸಿದ ಜನರು ಅನ್ನ ನೀರು ಸರಿಯಾಗಿ ಕೊಡದಿರುವ ಬಗ್ಗೆ ಮಾದ್ಯಮಗಳಲ್ಲಿ ವರದಿಯಾಗಿದೆ,ಅಲ್ಲದೆ ಚಿಕ್ಕ ಚಿಕ್ಕ ಮಕ್ಕಳುಗಳು ಕೇಂದ್ರದಲ್ಲಿದ್ದು ಆ ಮಕ್ಕಳಿಹೆ ಹಾಲು ನೀಡದಿದ್ದರೆ ಮಕ್ಕಳ ಗತಿ ಏನು? ಸರಿಯಾದ ಸಮಯಕ್ಕೆ ಎಲ್ಲರಿಗೂ ತಿಂಡಿ ಊಟ ನೀರು ಕೊಡಬೇಕು ಮತ್ತು ಎಲ್ಲಾ ಕೇಂದ್ರಗಳಲ್ಲಿ ಸ್ನಾನ ಮತ್ತು ಶೌಚಾಗ್ರಹಗಳ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಜಿಲ್ಲಾ ಮತ್ತು ತಾಲೂಕು ಆಡಳಿತಕ್ಕೆಆಗ್ರಹಿಸಿದ್ದು,ಜೊತೆಗೆ ಶಾಸಕ ನರಸಿಂಹ ನಾಯಕ (ರಾಜುಗೌಡ)ರು ಕೂಡ ಕ್ವಾರಂಟೈನ್‍ಗಳಿಗೆ ಭೇಟಿ ನೀಡಿ ಕ್ವಾರಂಟೈನ್ ವ್ಯವಸ್ಥಾಪಕರು ಸರಿಯಾದ ವ್ಯವಸ್ಥೆ ಕಲ್ಪಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಶಾಸಕರಿಗು ಮನವಿ ಮಾಡಿದ್ದಾರೆ.