ಮತ್ತೆ ಎರಡು ಕೊರೋನಾ ಸೋಂಕು ಪತ್ತೆ: ಒಂದೇ ದಿನದಲ್ಲಿ  ಕಲಬುತಗಿಯಲ್ಲಿ 13 ಪಾಸಿಟಿವ್

0
52

ಕಲಬುರಗಿ: ಮಂಗಳವಾರ ಸಾಯಂಕಾಲ ಬುಲೆಟಿನ್‌ನಲ್ಲಿ ಮಹಾರಾಷ್ಟ್ರ ರಾಜ್ಯದಿಂದ ವಲಸೆ ಬಂದ ಜಿಲ್ಲೆಯ ಇಬ್ಬರಲ್ಲಿ ಕೊರೋನಾ ಸೋಂಕು‌ ಪತ್ತೆಯಾಗಿದ್ದು, ಇಂದು ಬೆಳಿಗ್ಗೆ 11 ಪಾಸಿಟಿವ್ ವರದಿಯಾಗಿದ್ದು, ಒಂದೇ ದಿನದಲ್ಲಿ 13 ಜನರಿಗೆ ಪಾಸಿಟಿವ್ ಆಗಿರುವುದು ವತದಿಯಾಗಿದೆ

ಮುಂಬೈ ಪ್ರವಾಸ ಹಿನ್ನೆಲೆಯ ಆಳಂದ‌ ತಾಲೂಕಿನ ಧಂಗಾಪೂರ ಮೂಲದ 6 ವರ್ಷದ ಬಾಲಕಿ (P-1376) ಮತ್ತು 35 ವರ್ಷದ ಮಹಿಳೆಯಲ್ಲಿ (P-1377) ಕೊರೋನಾ‌ ಸೋಂಕು ಕಂಡುಬಂದಿದೆ.

Contact Your\'s Advertisement; 9902492681

ಇವರಿಬ್ಬರು ಸರ್ಕಾರಿ ಕ್ವಾರಂಟೈನ್ ಸೆಂಟರ್‌ನಲ್ಲಿದ್ದವರಾಗಿದ್ದು, ಸೋಂಕು ದೃಢವಾದ‌ ನಂತರ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ‌ ನೀಡಲಾಗುತ್ತಿದೆ ಎಂದು ಡಿ.ಸಿ. ಶರತ್‌ ಬಿ. ತಿಳಿಸಿದ್ದಾರೆ.

ಮಂಗಳವಾರ ಒಟ್ಟಾರೆ 13 ಕೊರೋನಾ ಸೋಂಕು ಕಂಡುಬಂದಿದೆ. ಜಿಲ್ಲೆಯಲ್ಲಿ ಇದೂವರೆಗೆ ಕೊರೋನಾ ಸೋಂಕಿತ 127 ರಲ್ಲಿ 55 ಜನ ಗುಣಮುಖರಾಗಿದ್ದಾರೆ. ಉಳಿದಂತೆ 7 ಜನರು ನಿಧನಹೊಂದಿದ್ದು, 65 ಜನರಿಗೆ ಚಿಕಿತ್ಸೆ‌ ಮುಂದುವರೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here