ಹೂಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಮುಖ್ಯಮಂತ್ರಿಗಳಿಗೆ ಒತ್ತಾಯ

0
49

ಸುರಪುರ: ಕೋವಿಡ್-19 ಸಮಸ್ಯೆಯಿಂದಾಗಿ ಕೊರೊನಾ ಲಾಕ್‍ಡೌನ್ ಹೊಡೆತಕ್ಕೆ ಸಿಕ್ಕು ರಾಜ್ಯದಲ್ಲಿನ ಹೂಗಾರರ ಬದುಕು ಬೀದಗೆ ಬಿದ್ದಿದೆ,ಸರಕಾರ ಹೂಗಾರರ ನೆರವಿಗೆ ಬರುವಂತೆ ಅಖಿಲ ಕರ್ನಾಟಕ ಹೂಗಾರ ಯುವ ಸೇನೆ ರಾಜ್ಯ ಉಪಾಧ್ಯಕ್ಷ ಗಿರಿಧರ ಹೂಗಾರ ಸರಕಾರಕ್ಕೆ ಒತ್ತಾಯಿಸಿದರು.

ನಗರದಲ್ಲಿ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ,50 ದಿನದಿಂದ ಲಾಕ್‍ಡೌನ್ ಘೋಷಣೆಯಿಂದ ನಷ್ಟವುಂಟಾಗಿದೆ ಎಂದು ನೇಕಾರ ಮಡಿವಾಳ ಕ್ಷೌರಿಕ ಸೇರಿದಂತೆ ಅನೇಕ ಸಮುದಾಯಗಳಿಗೆ ಪರಿಹಾರ ಧನ ಘೋಷಣೆ ಮಾಡಿದ ಮುಖ್ಯಮಂತ್ರಿಗಳು ನಮ್ಮ ಹೂಗಾರ ಸಮುದಾಯದಕ್ಕೂ ಪರಿಹಾರ ಘೋಷಣೆ ಮಾಡಬೇಕು.

Contact Your\'s Advertisement; 9902492681

ಲಾಕ್‍ಡೌನ್ ಸಂದರ್ಭದಲ್ಲಿಯೇ ಅಂಬೇಡ್ಕರ್ ಜಯಂತಿ,ಬಸವ ಜಯಂತಿ ಸೇರಿದಂತೆ ಅನೇಕ ಜಾತ್ರೆ ಉತ್ಸವ ಹಾಗು ಮುಖ್ಯವಾಗಿ ಮದುವೆ ಸಮಾರಂಭಗಳಲ್ಲಿ ಹೂಗಾರರಿಗೆ ವ್ಯಾಪಾರ ಲಭಿಸುತ್ತಿತ್ತು ಆದರೆ ಈ ವರ್ಷ ಇವ್ಯಾವವೂ ದೊಡ್ಡ ಮಟ್ಟದಲ್ಲಿ ಆಚರಣೆ ಇಲ್ಲದ ಕಾರಣ ಹೂಗಾರ ಸಮುದಾಯಕ್ಕೇ ದೊಡ್ಡ ನಷ್ಟವುಂಟಾಗಿ ನಮ್ಮ ಬದುಕು ಸಂಕಷ್ಟಕ್ಕೀಡಾಗಿದೆ.

ಆದ್ದರಿಂದ ನಮ್ಮ ಹೂಗಾರ ಸಮುದಾಯದ ಕುಟುಂಬಗಳ ಚೇತರಿಕೆಗಾಗಿ ಮಾನ್ಯ ಮುಖ್ಯಮಂತ್ರಿಗಳು ಪರಿಹಾರ ಘೋಷಣೆ ಮಾಡಬೇಕು, ನಮ್ಮ ಕಷ್ಟವನ್ನು ಈಗಾಗಲೆ ನಮ್ಮ ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಅವರು ತಮ್ಮ ಗಮನಕ್ಕೆ ತಂದಿದ್ದು,ನಾವುಗಳು ಕೂಡ ತಮ್ಮಲ್ಲಿ ಮನವಿ ಮಾಡುತ್ತೇವೆಂದು ಮನವಿಯಲ್ಲಿ ಉಲ್ಲೇಖಿಸಿ ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಂಬ್ರೇಶ ಹೂಗಾರ,ಶಿವಕಾಂತ ಬೇವಿನಾಳ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here