ಖರ್ಗೆ ಪತ್ರಕ್ಕೆ ಸ್ಪಂದಿಸಿದ ಕೇಂದ್ರ ಸಚಿವ ಪಾಸ್ವಾನ್; ಹೆಚ್ಚುವರಿ ತೊಗರಿ ಖರೀದಿಗೆ ರಾಜ್ಯ ಸರಕಾರಕ್ಕೆ ಪತ್ರ

0
317

ಕಲಬುರಗಿ: ಕೇಂದ್ರ ಮಾಜಿ ಸಚಿವರಾದ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ. ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇಂದ್ರ ಗ್ರಾಹಕರ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು‌ ಸಚಿವರಾದ ರಾಮ್ ವಿಲಾಸ್ ಪಾಸ್ವಾನ ನಡುವಿನ ದೂರವಾಣಿ ಮಾತುಕತೆ ಫಲಪ್ರದವಾಗಿ ಕೇಂದ್ರ ಹೆಚ್ಚುವರಿ ತೊಗರಿ ಖರೀದಿಗೆ ಒಪ್ಪಿಗೆ ನೀಡಿದ್ದು, ಬೆಲೆ ಸ್ಥಿರಿಕರಣ ನಿಧಿ ( Price Stabilisation Fund- PSF) ಅಡಿಯಲ್ಲಿ ಹೆಚ್ಚುವರಿ ತೊಗರಿ ಖರೀದಿ ಮಾಡುವಂತೆ ರಾಜ್ಯ ಸರಕಾರಕ್ಕೆ ಮಂಗಳವಾರ ಪತ್ರ ಬರೆದಿದೆ.

ದೇಶದಲ್ಲಿಯೇ ಅತಿಹೆಚ್ಚು ತೊಗರಿ ಉತ್ಪಾದನೆ ಮಾಡುವ ಕಲ್ಯಾಣ ಕರ್ನಾಟಕ ಅದರಲ್ಲೂ ಕಲಬುರಗಿ ಜಿಲ್ಲೆಯ ತೊಗರಿ ಬೆಳೆಗಾರರು ರಾಜ್ಯ ಸರಕಾರ ಬೆಲೆ ಬೆಂಬಲ ಯೋಜನೆಯಡಿಯಲ್ಲಿ ( Price Support Scheme -PSS) ನಿಗದಿಪಡಿಸಿದ್ದ ಪ್ರಮಾಣದ ತೊಗರಿ ಮಾರಾಟ ಮಾಡಿದ್ದಾರೆ. ಆದರೆ, ಕೋವಿಡ್ 19 ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ವಿಧಿಸಲಾದ ಲಾಕ್ ಡೌನ್ ನಿಂದಾಗಿ ಬಹುತೇಕ ರೈತರು ತಾವು ಬೆಳೆದ ಅಪಾರ ಪ್ರಮಾಣದ ತೊಗರಿ ಹಾಗೂ ಕಡಲೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೆ ನಷ್ಠ ಅನುಭವಿಸಿದ್ದರು.

Contact Your\'s Advertisement; 9902492681

ಈ ಸಂಕಷ್ಟದ ಪರಿಸ್ಥಿತಿಯನ್ನು ಅರಿತುಕೊಂಡ, ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಕೇಂದ್ರ ಸಚಿವ ವಿಲಾಸ ಪಾಸ್ವಾನ್ ಅವರಿಗೆ ದೂರವಾಣಿ‌ ಕರೆ ಮಾಡಿ ಕಲಬುರಗಿ ಜಿಲ್ಲೆ ಸೇರಿದಂತೆ ಇಡೀ ಕ.ಕ. ಭಾಗದ ತೊಗರಿ ಬೆಳೆಗಾರರ ಸಂಕಷ್ಟವನ್ನು ವಿವರಿಸಿ ಹೆಚ್ಚುವರಿ ತೊಗರಿ ಹಾಗೂ ಕಡಲೆ ಖರೀದಿಸುವಂತೆ ಕೋರಿದ್ದರು.

ಈ‌ ಹಿನ್ನೆಲೆಯಲ್ಲಿ ಕೇಂದ್ರ ಸಚಿವರ ಸೂಚನೆಯಂತೆ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ ( National Agriculture Cooperative Marketing Federation of India)ದ ವ್ಯವಸ್ಥಾಪಕ ನಿರ್ದೇಶಕರಾದ ಸಂಜೀವ್ ಕೆ. ಛಡ್ಡಾ ಅವರು ಕರ್ನಾಟಕ ಸರಕಾರದ ಸಹಕಾರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ನಾಗಾಂಬಿಕಾ ದೇವಿ ಅವರಿಗೆ ಅವರಿಗೆ ಪತ್ರ ಬರೆದು, ರಾಜ್ಯ ಸರಕಾರ ಬೆಲೆ ಬೆಂಬಲ ಯೋಜನೆಯಡಿಯಲ್ಲಿ ಈಗಾಗಲೇ ನಿಗದಿಪಡಿಸಿದ ಪ್ರಮಾಣದ ತೊಗರಿ ಖರೀದಿ ಮಾಡಿದ್ದರೂ ಕೂಡಾ ರಾಷ್ಟ್ರೀಯ ದ್ವಿದಳ ಧಾನ್ಯ ಸಂರಕ್ಷಣಾ ( National pulses buffer) ದೃಷ್ಟಿಯಿಂದ ತೊಗರಿಯನ್ನು ಖರೀಸಿದಬಹುದಾಗಿದಸ. ಹಾಗಾಗಿ ಬೆಲೆ ಸ್ಥಿರೀಕರಣ ನಿಧಿ ( PSF) ಅಡಿಯಲ್ಲಿ ಏಜೆನ್ಸಿಗಳಾದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ರಾಜ್ಯ ತೊಗರಿ ಮಂಡಳಿಯ ಮೂಲಕ ಹೆಚ್ಚುವರಿ ತೊಗರಿ ಖರೀದಿ ಮಾಡಿ ಹಾಗೆ ಖರೀದಿಸಿದ ಧಾನ್ಯಗಳನ್ನು ವೇರ್ ಹೌಸ್ ಗಳಲ್ಲಿ ಸಂಗ್ರಹಿಸಿಟ್ಟು ಪ್ರತಿದಿನದ ರಸೀದಿಗಳನ್ನು ಸಲ್ಲಿಸಿದರೆ ತಕ್ಷಣ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ವಿಲಾಸ ಪಾಸ್ವಾನ್ ಅವರ ತತಕ್ಷಣದ ಕ್ರಮಕ್ಕೆ ಹರ್ಷ ವ್ಯಕ್ತಪಡಿಸಿರುವ ಖರ್ಗೆ ಅವರು ಸಚಿವರಿಗೆ ಧನ್ಯವಾದ ತಿಳಿಸಿ, ಸಂಕಷ್ಟದಲ್ಲಿರುವ ತೊಗರಿ ಬೆಳೆಗಾರರಿಗೆ ಸ್ಪಂದಿಸಿರುವುದು ತಮಗೆ ಸಮಾಧಾನ ತಂದಿದ್ದು ಇದರಿಂದ ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಅನುಕೂಲವಾಗಿದೆ ಎಂದು ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ ಖರ್ಗೆ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here