ಕಲಬುರಗಿ: ಕೊರೊನಾ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ಎಫೆಕ್ಟ್ ಗೆ ನಗರದ ಓರ್ವ ಹಣ್ಣಿನ ವ್ಯಾಪಾರಿ ನೇಣು ಬಿಗಿದ್ದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ನಗರದ ಮೊಮಿನಪುರ ಚಟ್ಟೆ ವಾಡಿ ಬಡಾವಣೆಯ ನಿವಾಸಿ ಅಬ್ದುಲ್ ಖದೀರ್ ಬಾಗಬಾನ್ (32) ಆತ್ಮಹತ್ಯೆಗೆ ಮಾಡಿಕೊಂಡ ವ್ಯಕ್ತಿ. ಇಬ್ಬರು ಮಕ್ಕಳು ಹೊಂದಿದರು.
ಕಳೆದ ಮೂರು ತಿಂಗಳ ಹಿಂದೆ ಹಣ್ಣು ವ್ಯಾಪಾರಕ್ಕಾಗಿ 4 ರಿಂದ 5 ಲಕ್ಷ ಸಾಲ ಸಾಲ ಪಡೆದು, ರಂಜಾನ್ ತಿಂಗಳಲ್ಲಿ ಹಣ್ಣು ವ್ಯಾಪಾರ ಮಾಡಿ, ತೀರಿಸುವ ಯತ್ನಿಸಿದ ಖದೀರ, ಲಾಕ್ ಡೌನ್ ಯಿಂದಾಗಿ ವ್ಯಾಪರ ಮಾಡಲು ಜಿಲ್ಲಾಡಳಿತ ಅವಕಾಶ ನೀಡದ ಹಿನ್ನೆಲೆ ಮತ್ತು ಪಡೆದ ಸಾಲ ತೀರಸುವ ಬಗ್ಗೆ ಚಿಂತಿಸಿ ಮನನೊಂದು ನಿನ್ನೆ ತಡ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಚೌಕ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಹಿಂದೆ ನಗರದ ಬ್ರಹ್ಮಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ಸಿದ್ದೇಶ್ವರ ನಗರದಲ್ಲಿ ಸಿದ್ದಣ್ಣ ಮಲ್ಲಶೇಪ್ಪ ಎಂಬ ವಾಟಾರ್ ಸಪ್ಲೈ ಮಾಡುವ ವ್ಯಕ್ತಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡರುವ ಆರೋಪಗಳು ಕೇಳಿಬಂದಿತು.
ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಕೊರೊನಾ ಭೀತಿ ಒಂದು ಕಡೆ ಇದ್ದರೆ ಮತ್ತೊಂದೆಡೆ ವಿವಿಧ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳವ ಘಟನೆ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸುತ್ತಿವೆ.