ನೆಗೆಟಿವ್ ವರದಿ ಬಂದಿರುವ ವಲಸಿಗರು ಮನೆಗೆ: ಡಾ. ಉಮೇಶ್ ಜಾಧವ್

0
137

ಕಲಬುರಗಿ: ಮಹಾರಾಷ್ಟ್ರ ಮತ್ತಿತರೆಡೆಯಿಂದ ಆಗಮಿಸಿ ಜಿಲ್ಲೆಯ ವಿವಿಧೆಡೆ ಸಾಂಸ್ಥಿಕ ಕ್ವಾರಾಂಟೈನ್ ನಲ್ಲಿರುವ ವಲಸಿಗರ ಪೈಕಿ ಕೋವಿಡ್-19 ನೆಗೆಟಿವ್ ಬಂದಿರುವ ಕಾರ್ಮಿಕರನ್ನು ಅವರವರ ಮನೆಗಳಿಗೆ ಕಳುಹಿಸಿ ಹೋಂ ಕ್ವಾರಾಂಟೈನ್ ಮಾಡಲಾಗುತ್ತದೆ ಎಂದು ಸಂಸದ ಡಾ.ಉಮೇಶ್ ಜಾಧವ್ ಅವರು ತಳಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಪಂಕಜ್ ಕುಮಾರ್ ಪಾಂಡೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಪಂಕಜ್ ಕುಮಾರ್ ಪಾಂಡೆ ಅವರು ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆಯ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಜಾಧವ್ ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಸಾಂಸ್ಥಿಕ ಕ್ವಾರಾಂಟೈನ್‍ನಲ್ಲಿರುವವರಲ್ಲಿ ಪಾಸಿಟಿವ್ ಬಂದಿರುವವರಿಗೆ ಇಎಸ್‍ಐಸಿ ಮತ್ತು ಜಿಮ್ಸ್ ಕೋವಿಡ್- 19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೆಗೆಟಿವ್ ವರದಿ ಬಂದಿರುವವರು ಮನೆಗೆ ತೆರಳಬಹುದು. ಆದರೆ, ಆರೋಗ್ಯ ಇಲಾಖೆ ಸೂಚಿಸಿರುವಷ್ಟು ದಿನಗಳು ಕಡ್ಡಾಯವಾಗಿ ಹೋಂ ಕ್ವಾರಾಂಟೈನ್‍ನಲ್ಲಿ ಇರಬೇಕು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here