ಕಲಬುರಗಿಯಲ್ಲಿ ಮೂವರು ಕೊರೋನಾ ಸೋಂಕಿತರು ಗುಣಮುಖ

0
33

ಕಲಬುರಗಿ: ನಗರದ ಮೂವರು ಕೊರೋನಾ ಸೋಂಕಿತರು ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ನಗರದ ಕರೀಂ ನಗರದ 35 ವರ್ಷದ ಯುವಕ (P-697), ಇಸ್ಲಾಮಾಬಾದ ಕಾಲೋನಿಯ 36 ವರ್ಷದ ಮಹಿಳೆ(P-698) ಮತ್ತು 41 ವರ್ಷದ ಪುರುಷ (P-699) ಮಹಾಮಾರಿ ಕೊರೋನಾ ಸೋಂಕಿನ ವಿರುದ್ಧ ಹೋರಾಡಿ ರೋಗದಿಂದ ವಾಸಿಯಾದವರು.

Contact Your\'s Advertisement; 9902492681

ಜಿಲ್ಲೆಯಲ್ಲಿ ಇದೂವರೆಗೆ ಕೊರೋನಾ‌ ಪೀಡಿತ 134 ರೋಗಿಗಳಲ್ಲಿ 7 ಜನ ನಿಧನ‌ರಾಗಿದ್ದು, 58 ರೋಗಿ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ‌. ಉಳಿದಂತೆ 69 ರೋಗಿಗಳಿಗೆ ಚಿಕಿತ್ಸೆ‌ ಮುಂದುವರೆದಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here