ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಆರ್‍ಕೆಎಸ್ ವಿರೋಧ

0
73

ವಾಡಿ: ಎಪಿಎಂಸಿ ಕಾಯ್ದೆಗೆ ಎಪಿಎಲ್‍ಎಂ-2017 ಕಾಯ್ದೆಯ ಮೂಲಕ ತಿದ್ದುಪಡಿ ಮಾಡಿ ಅದನ್ನು ಸುಗ್ರೀವಾಜ್ಞೆ ಮೂಲಕ ಅನುಷ್ಟಾನಕ್ಕೆ ತರಲು ಮುಂದಾಗಿರುವ ಕೇಂದ್ರ ಸರಕಾರದ ಕ್ರಮವನ್ನು ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‍ಕೆಎಸ್) ಖಂಡಿಸಿದೆ.

ಈ ಕುರಿತು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಹಳಕರ್ಟಿ ಗ್ರಾಪಂ ಅಧಿಕಾರಿಗೆ ಸಲ್ಲಿಸಿರುವ ಆರ್‍ಕೆಎಸ್ ಸಂಚಾಲಕ ಶಿವುಕುಮಾರ ಆಂದೋಲಾ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೇಂದ್ರ ಬಿಜೆಪಿ ಸರಕಾರ, ಕೃಷಿ ಉತ್ಪನ್ನಗಳನ್ನು ಬಹುರಾಷ್ಟ್ರೀಯ ಕಂಪನಿಗಳ ಮಡಿಲಿಗೆ ಹಾಕಿದೆ. ಜಾರಿಗೊಳಿಸಲಾಗಿರುವ ಕೊರೊನಾ ಲಾಕ್‍ಡೌನ್ ಬಡ ಮತ್ತು ಮಧ್ಯಮ ರೈತರು ಕೃಷಿ ಕಾರ್ಮಿಕರ ಜೀವನವನ್ನು ಸಂಕಟಮಯಗೊಳಿಸಿದೆ. ರೈತರ ಬದುಕನ್ನು ಹಸನು ಮಾಡಲು ಧಾವಿಸಬೇಕಾದ ಸರಕಾರ, ರೈತರ ಹಿತಾಸಕ್ತಿಯನ್ನು ಕಾರ್ಪೋರೇಟ್ ಕಂಪನಿಗಳ ಯಂತ್ರಗಳಡಿ ನಜ್ಜುಗುಜ್ಜಾಗುವಂತೆ ಮಾಡಲು ಈ ತಿದ್ದುಪಡಿಗಳನ್ನು ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ರೈತ ವಿರೋಧಿ ಸುಗ್ರೀವಾಜ್ಞೆಯನ್ನು ಕೂಡಲೇ ಹಿಂಪಡೆಯಬೇಕು. ಬಂಡವಾಳಿಗರ ಲಾಭಕ್ಕಾಗಿ ರೈತರನ್ನು ಬಲಿ ಕೊಡಲು ಮುಂದಾದರೆ, ಮುಂಬರುವ ದಿನಗಳಲ್ಲಿ ರಾಜ್ಯದಾಧ್ಯಂತ ರೈತರನ್ನು ಸಂಘಟಿಸುವ ಮೂಲಕ ಆರ್‍ಕೆಎಸ್ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.

ಜೀವನಾವಶ್ಯಕ ವಸ್ತುಗಳನ್ನು ಪಡೆಯಲು ಬಡ ಕುಟುಂಬಗಳಿಗೆ ಕನಿಷ್ಠ ರೂ.10 ಸಾವಿರ ನೀಡಬೇಕು. ರೈತರಿಗೆ ಅಗತ್ಯವಿರುವಷ್ಟು ಬಡ್ಡಿರಹಿತ ಸಾಲವನ್ನು ನೀಡಬೇಕು. ಬಡ ರೈತರಿಗೆ ವರ್ಷವಿಡೀ ಉದ್ಯೋಗ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ರೈತ ಮುಖಂಡರಾದ ಈರಣ್ಣ ಲೋಕನಳ್ಳಿ, ದೊಡ್ಡಪ್ಪ ಹೊಸ್ಸೂರ, ಅಯ್ಯಪ್ಪ ಹುಳಗೋಳ, ಚೌಡಪ್ಪ ಗಂಜಿ, ಭೀಮು ಮಾಟ್ನಳ್ಳಿ, ನಾಗರಾಜ ಇಸಬಾ, ಸಿದ್ದರಾಜ ಮದ್ರಿ, ದತ್ತಾತ್ರೇಯ ಹುಡೇಕರ, ಗೌತಮ ಪರತೂರಕರ, ಮಲ್ಲಿನಾಥ ಹುಂಡೇಕಲ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here