ಸುರಪುರ: ಕೊರೊನಾ ಸೊಂಕು ಇಂದು ಎಲ್ಲೆಡೆ ಹರಡುತ್ತಿದ್ದು ಪ್ರತಿಯೊಬ್ಬರೂ ಮುಂಜಾಗ್ರತೆ ವಹಿಸುವುದು ಅವಶ್ಯವಾಗಿದೆ.ಆದ್ದರಿಂದ ಈಬಾರಿಯ ರಂಜಾನ್ ಹಬ್ಬ ಮನೆಯಲ್ಲೆ ಆಚರಿಸುವಂತೆ ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ತಿಳಿಸಿದರು.
ನಗರದ ಪೊಲೀಸ್ ಠಾಣೆಯಲ್ಲಿ ನಡೆದ ರಂಜಾನ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ರಂಜಾನ್ ಮನೆಯಲ್ಲಿ ಆಚರಿಸಕವುದೆಂದರೆ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಂಡಂತೆ.ಕೊರೊನಾ ನಿರ್ಮೂಲನೆಗೆ ಮನೆಯಲ್ಲಿ ಇರುವುದು ಅತ್ಯಾವಶ್ಯಕವಾಗಿದೆ ಎಂದರು.
ಆರಕ್ಷಕ ನಿರೀಕ್ಷಕ ಸಾಹೇಬಗೌಡ ಪಾಟೀಲ್ ಮಾತನಾಡಿ, ರಂಜಾನ್ ಸಾಮೂಹಿಕ ಪ್ರಾರ್ಥನೆಗೆ ಇದ್ಗಾಗೆ ಹೋಗ ಬೇಡಿ.ಮನೆಯಲ್ಲೆ ಪ್ರಾರ್ಥನೆ ಮಾಡಿ.ಹಬ್ಬದ ಶುಭಾಶಯ ವಿನಿಮಯವೂ ಸಾಮಾಜಿಕ ಅಂತರದಲ್ಲಿರಲಿ.ಬೇರೆಯವರನ್ನು ಮನೆಗೆ ಆಹ್ವಾನಿಸುವುದಾಗಲಿ,ನೀವು ಬೇರೆಯವರ ಮನೆಗೆ ಹೋಗದಿರುವುದು ಆರೋಗ್ಯಕರ ಆದ್ದರಿಂದ ಎಲ್ಲರೂ ಈ ನಿಯಮಗಳ ಪಾಲಿಸುವ ಮೂಲಕ ಕೊರೊನಾ ನಿರ್ಮೂಲನೆಗೆ ಸಹಕರಿಸುವಂತೆ ತಿಳಿಸಿದರು.
ಮುಸ್ಲಿಂ ಸಮುದಾಯದ ಅನೇಕ ಮುಖಂಡರು ಮಾತನಾಡಿ,ನಾವುಗಳು ಕೂಡ ಎಲ್ಲಾ ನಿಯಮಗಳಿಗೆ ಬದ್ಧರಾಗಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅಬ್ದುಲ್ ಗಫೂರ ನಗನೂರಿ ಶೇಖ್ ಮಹಿಬೂಬ ಒಂಟಿ ಎಕ್ಬಾಲ್ ಒಂಟಿ ಉಸ್ತಾದ್ ವಜಾಹತ್ ಹುಸೇನ್ ನಿಜ್ಜು ಉಸ್ತಾದ್ ಅಬ್ದುಲ್ ಗಫೂರ್ ಖುರೇಷಿ ಮುನವರ ಅರಕೇರಿ ಭಕ್ತಿಯಾರ್ ಅಹ್ಮದ್ ಷರೀಫ್ ಮಹ್ಮದ್ ಶಕೀಲ್ ಜಹೀರ್ ಸೇರಿದಂತೆ ಅನೇಕರಿದ್ದರು.