ಬೊಲೆರೊ ಮ್ಯಾಕ್ಸ್ ಟ್ರಕ್ ಮೇಲಿನಿಂದ ಬಿದ್ದು ಬಾದ್ಯಾಪುರ ಗ್ರಾಮದ ವ್ಯಕ್ತಿ ಸಾವು

0
63

ಸುರಪುರ: ಶನಿವಾರ ಸುರಪುರ ದಿಂದ ಸಿಮೆಂಟ್ ತೆಗೆದುಕೊಂಡು ಹೋಗಲು ಬಂದು ಸಿಮೆಂಟ್ ತೆಗೆದುಕೊಂಡು ಹೋಗುವಾದ ಬೊಲೆರೊ ಮ್ಯಾಕ್ಸ್ ಟ್ರಕ್ ಗೂಡ್ಸ್ ವಾಹನದ ಮೇಲಿನಿಂದ ಬಿದ್ದು ವ್ಯಕ್ತಿ ಮೃತನಾದ ಘಟನೆ ನಡೆದಿದೆ.

ತಾಲೂಕಿನ ಬಾದ್ಯಾಪುರ ಗ್ರಾಮದ ಸಿದ್ದಪ್ಪ ಮಲ್ಲಪ್ಪ ಮಗ್ಗದ (೫೫ ವರ್ಷ) ವ್ಯಕ್ತಿ ಶನಿವಾರ ಸುರಪುರಕ್ಕೆ ಬಂದು ಸಿಮೆಂಟ್ ತೆಗದುಕೊಂಡು ಬೊಲೆರೊ ಮ್ಯಾಕ್ಸ್ ಗೂಡ್ಸ್ ಟ್ರಕ್‌ಲ್ಲಿ ತೆಗೆದುಕೊಂಡು ಹೋಗುವಾಗ ಬೈರಿಮಡ್ಡಿ ಕ್ರಾಸ್ ಬಳಿಯಲ್ಲಿ ವಾಹನದಿಂದ ಕೆಳಗೆ ಬಿದ್ದಿದ್ದು ಗಂಭೀರವಾಗಿ ಗಾಯಗೊಂಡಿದ್ದನು.ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ರಾಯಚೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

Contact Your\'s Advertisement; 9902492681

ರಾಯಚೂರಿನಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಸೋಲಾಪುರಕ್ಕೆ ಕರೆದೊಯ್ಯುವಂತೆ ತಿಳಿಸಿದ್ದರು ಎನ್ನಲಾಗಿದ್ದು,ಸೋಲಾಪುರಕ್ಕೆ ಹೊಯ್ಯುವಾಗ ಮಾರ್ಗಮದ್ಯೆ ಲಕ್ಷ್ಮೀಪುರ ಬಳಿ ಸಾವನ್ನಪ್ಪಿದ್ದಾನೆ.ವಾಹನ ಚಾಲಕನ ಅಜಾಗರೂಕತೆಯೆ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದ್ದು,ಚಾಲಕ ಪರಾರಿಯಾಗಿದ್ಧಾನೆ.

ಮೃತ ವ್ಯಕ್ತಿ ಸಿದ್ದಪ್ಪನಿಗೆ ಇಬ್ಬರು ಗಂಡು ಮುರು ಜನ ಹೆಣ್ಣು ಮಕ್ಕಳಿದ್ದು,ನಗರದ ಸರಕಾರಿ ಆಸ್ಪತ್ರೆಯಲ್ಲಿ ಶವ ಇರಿಸಲಾಗಿದ್ದು ಕುಟುಂಬಸ್ಥರ ರೋದನೆ ಮುಗಿಲು ಮಟ್ಟಿತ್ತು.ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here